ಮಡಿಕೇರಿ, ನ.೧೧ : ಮಕ್ಕಳ ದಿನಾಚರಣೆಯ ಪ್ರಯುಕ್ತ ಮಡಿಕೇರಿ ನಗರದ ಮಹದೇವಪೇಟೆಯ ಎಸ್‌ಎಸ್ ಆಸ್ಪತ್ರೆ ವತಿಯಿಂದ ತಾ. ೧೭ ರಂದು ಎಲ್‌ಕೆಜಿಯಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಆಸ್ಪತ್ರೆಯ ಸಮೀಪದಲ್ಲಿರುವ ಕ್ರೆಸೆಂಟ್ ಸ್ಕೂಲ್ ಆವರಣದಲ್ಲಿ ಅಂದು ಬೆಳಿಗ್ಗೆ ೯ ಗಂಟೆಯಿAದ ೧೧ ಗಂಟೆಯವರೆಗೆ ಸ್ಪರ್ಧೆ ನಡೆಯಲಿದ್ದು, ೮.೩೦ ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಶಿಲ್ಪ ಸತೀಶ್ ಮನವಿ ಮಾಡಿದ್ದಾರೆ.

ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಮೂರು ವಿಭಾಗಗಳಲ್ಲಿಯೂ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಆಕರ್ಷಕ ನಗದು ಬಹುಮಾನ, ಪದಕ, ಪ್ರಶಸ್ತಿ ಪತ್ರ ಮತ್ತು ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು.

ಮೊದಲನೇ ವಿಭಾಗದ (ಎಲ್‌ಕೆಜಿಯಿಂದ ೧ನೇ ತರಗತಿ)ವಿದ್ಯಾರ್ಥಿಗಳು ವರ್ಣರಂಜಿತ ಉದ್ಯಾನವನ, ಎರಡನೇ ವಿಭಾಗದ (೨ ರಿಂದ ೬ನೇ ತರಗತಿ) ವಿದ್ಯಾರ್ಥಿಗಳು ಗ್ರಾಮ ಜೀವನ, ಹಳ್ಳಿಯ ಸೊಬಗು ಹಾಗೂ ಮೂರನೇ ವಿಭಾಗದ (೭ರಿಂದ ೧೦ನೇ ತರಗತಿ) ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಸಂಬAಧಿಸಿದAತೆ ಚಿತ್ರ ಬಿಡಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಹೆಸರು ನೋಂದಾಯಿಸಿಕೊಳ್ಳುವವರು ೮೪೩೧೨೮೫೫೦೦, ೮೮೬೧೯೬೫೨೪೨ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.