ಆಲೂರು ಸಿದ್ದಾಪುರ, ನ. ೧೧: ಸ್ಥಳೀಯ ಪ್ರೌಢಶಾಲಾ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು ಪ್ರೌಢಶಾಲಾ ಕನ್ನಡ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕಿಗಳಾಗಿ ಹಾಸನ ಜಿಲ್ಲೆಯ ಬಾಣಾವರ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕ ರಮೇಶ್ ಶಿಕ್ಷಕರಿಗೆ ತರಬೇತಿ ನೀಡಿದರು.
ಮಕ್ಕಳಿಗೆ ಕಲಿಕೆ ವಿಧಾನವನ್ನು ಸುಲಭವಾಗಿ ಅರ್ಥ ಮಾಡಿಸಬೇಕು. ವಿದ್ಯಾರ್ಥಿಗಳ ಗ್ರಹಿಕೆ ಶಕ್ತಿ ಹೆಚ್ಚಿರುವುದರಿಂದ ನಾವು ಅವರಿಗೆ ಅವರ ಕಲಿಕೆ ಅನುಗುಣವಾಗಿ ಕಲಿಕೆಗೆ ಮುಂದಾಗಬೇಕು. ಹಳೆಯ ಪದ್ಧತಿಯಲ್ಲಿ ನಾವು ಕಲಿಸಲು ಮುಂದಾದರೆ ನಮಗಿಂತ ವೇಗವಾಗಿ ವಿದ್ಯಾರ್ಥಿಗಳು ಮುಂದಿರುತ್ತಾರೆ ಎಂದರು.
ಕಾರ್ಯಕ್ರಮವನ್ನು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಭಾಗ್ಯಮ್ಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ. ಟಿ.ಸೋಮಶೇಖರ್, ಸೋಮವಾರಪೇಟೆ ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೇಮಂತ್ ಕುಮಾರ್, ಕಾರ್ಯದರ್ಶಿ ಶೈಲಾ, ಬಾಣಾವರ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕ ರಮೇಶ್, ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಚಿತ್ರಕಲಾ ಶಿಕ್ಷಕ ಉ, ರಾ ನಾಗೇಶ್ ಇತರರಿದ್ದರು.
ಈ ಸಂದರ್ಭ ಸಂಪನ್ಮೂಲ ವ್ಯಕ್ತಿ ಹಾಗೂ ಶಿಕ್ಷಕರ ನಡುವೆ ಸಂವಾದ ನಡೆಯಿತು.
ಸೋಮವಾರಪೇಟೆ ತಾಲೂಕಿನ ಸುಮಾರು ೭೦ ಕನ್ನಡ ಶಿಕ್ಷಕರು, ಶಿಕ್ಷಕಿಯರು ಪಾಲ್ಗೊಂಡಿದ್ದರು.