ಕೂಡಿಗೆ, ನ.೧೧ : ಪಶುಪಾಲನಾ ಇಲಾಖೆಯ ವತಿಯಿಂದ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ೬ ನೇ ಸುತ್ತಿನ ರಾಷ್ಟಿçÃಯ ಎನ್‌ಎಡಿಸಿಪಿ ಕಾರ್ಯಕ್ರಮದ ಅಡಿಯಲ್ಲಿ ಹೆಬ್ಬಾಲೆ, ಶಿರಂಗಾಲ, ಕೂಡಿಗೆ, ಚಟ್ಟಳ್ಳಿ, ಸುಂಟಿಕೊಪ್ಪ ೭ನೇ ಹೊಸಕೋಟೆ ಹುದುಗೂರು, ಅಭ್ಯತ್‌ಮಂಗಲ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ದನ ಹಾಗೂ ಎಮ್ಮೆಗಳಿಗೆ ಉಚಿತವಾಗಿ ಕಾಲುಬಾಯಿ ಜ್ವರದ ಲಸಿಕೆಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕಿನಾದ್ಯಂತ ಇದುವರೆಗೆ ೮,೫೦೦ ಜಾನುವಾರುಗಳಿಗೆ ಲಸಿಕೆಯನ್ನು ಇಲಾಖೆಯ ವತಿಯಿಂದ ನೀಡಲಾಗಿದೆ ಎಂದು ಕುಶಾಲನಗರದ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ. ಸಂಜೀವ್ ಕುಮಾರ್ ಆರ್ ಶಿಂಧೆ ಮಾಹಿತಿಯನ್ನು ನೀಡಿದ್ದಾರೆ.
ಲಸಿಕೆ ಕಾರ್ಯಕ್ರಮದಲ್ಲಿ ಡಾ. ಅಮ್ಮತ್, ಪಶು ಪರೀಕ್ಷಕರಾದ ಸುಜಾತ, ವಿನಯ ಕುಮಾರ್ ಸೇರಿದಂತೆ ಆಯಾ ವಿಭಾಗದ ಪಶುವೈದ್ಯರು ಭಾಗವಹಿಸಿದ್ದರು. ತಾಲೂಕಿನ ಎಲ್ಲಾ ಪಶು ಆಸ್ಪತ್ರೆಯ ಘಟಕಗಳ ಮೂಲಕ ಉಚಿತವಾಗಿ ಲಸಿಕೆಯನ್ನು ನೀಡುವ ಕಾರ್ಯ ಆರಂಭಗೊAಡಿದ್ದು ತಾ ೨೦ರವರೆಗೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಇದು ಪ್ರತಿ ೬ತಿಂಗಳಿಗೊಮ್ಮೆ ನಡೆಯುವ ಕಾರ್ಯಕ್ರಮವಾಗಿದ್ದು, ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು. ಅಧಿಕಾರಿಗಳು ಜಿಲ್ಲೆಯಾದ್ಯಂತ ಸುಮಾರು ೬೬,೫೦೦. ದನ,ಎಮ್ಮೆಗಳಿಗೆ ಲಸಿಕೆಯನ್ನು ಹಾಕುವ ಗುರಿ ಹೊಂದಲಾಗಿದೆ ಎಂದು ಡಾ. ಸಂಜೀವ್ ಕುಮಾರ್ ಆರ್ ಶಿಂಧೆ ತಿಳಿಸಿದ್ದಾರೆ.