ಮಡಿಕೇರಿ, ನ. ೧೧ : ಹಾಸನದಲ್ಲಿ ನಡೆದ ರಾಷ್ಟಿçÃಯ ಮಟ್ಟದ ಹಾಸನಾಂಬ ನೃತ್ಯ ವೈಭವ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ತಂಡ ಪ್ರಥಮ ಸ್ಥಾನ ಪಡೆದು ಕೊಂಡಿದೆ. ಸೋಮವಾರ ಪೇಟೆಯಲ್ಲಿ ನಡೆದ ೧೭ನೇ ವರ್ಷದ ಅದ್ಧೂರಿ ಕನ್ನಡ ರಾಜ್ಯೋತ್ಸವ ಸಮಾರಂಭದ ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರಥಮ, ರೆಬೆಲ್ ಡ್ಯಾನ್ಸ್ ಗ್ರೂಪ್ ವತಿಯಿಂದ ನಡೆದ ರೆಬೆಲ್ ಕಪ್ ಮಂಡ್ಯ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ, ಸೀನಿಯರ್ಸ್ ವಿಭಾಗದಲ್ಲಿ ಹಾಗೂ ಜೂನಿಯರ್ಸ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಗೆದ್ದುಕೊಂಡಿದೆ.

ಆಯುಧ ಪೂಜೆಯ ಪ್ರಯುಕ್ತ ಸೋಮವಾರಪೇಟೆ ವಾಹನ ಚಾಲಕರು ಹಾಗೂ ಮೋಟಾರು ಕೆಲಸಗಾರರ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ, ಮಡಿಕೇರಿ ನಗರ ದಸರಾ ಸಮಿತಿಯ ಯುವ ದಸರಾದಲ್ಲಿ ದ್ವಿತೀಯ ಬಹುಮಾನ ಹಾಗೂ ಶ್ರೀ ಕಾವೇರಿ ದಸರಾ ಸಮಿತಿಯಿಂದ ನಡೆದ ಯುವ ದಸರಾ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದೆ ಎಂದು ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ಸಂಯೋಜಕರಾದ ಅಭಿಷೇಕ್ ಹಾಗೂ ಅಜಿತ್ ತಿಳಿಸಿದ್ದಾರೆ.

ಈ ನೃತ್ಯ ಸ್ಪರ್ಧೆಗಳಲ್ಲಿ ತೇಜಸ್ ರಾಜ್, ಅಭಿರಾಮ್ ಆರ್ಯ, ಮೊನಾಲಿ, ಸಾನ್ವಿಕ, ದಿಶಾ, ಲಹರಿ, ಆಧ್ಯಾಶ್ರೀ, ನಿಶ್ಮಿತಾ, ಶ್ರಾವ್ಯ, ಲವಿಶ್, ದಿಯಾ, ಲೀಶ, ಗ್ರಂಥ, ಜೈಷ್ಣವ್ ಐಷಾನಿ, ಕಾಶ್ನಿ, ವಂಶಿಕ, ಮದನ್, ರಿಷಿ, ವರ್ಷ, ಯಶಿಕ, ಭಾನ್ವಿ, ಶಶಾಂಕ್, ಚಂದನ್, ಯಾನ ಶೆಟ್ಟಿ, ಪ್ರೇಕ್ಷ, ಶಿವಕುಮಾರ್, ಕೀರ್ತನ್, ತೇಜಸ್, ಅಧಿತಿ ಚೋಂದಮ್ಮ, ಜಾನ್ವಿ ಬೋಜಮ್ಮ, ತಶ್ಮಿತ, ಆರ್ಯನ್, ಸುಮಿತ್ರಾ, ಭಾವನಾ ರೈ, ರೋಷನ್, ಸುಧರ್ಮ ಭಾಗವಹಿಸಿದ್ದರು.