ಮಡಿಕೇರಿ, ನ. ೧೧ : ಗ್ರಾಮೀಣ ಕೈಗಾರಿಕೆ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಟೈಲರಿಂಗ್, ಪ್ಲಂಬರ್ ಮತ್ತು ಸ್ಯಾನಿಟರಿ, ಟೈಲ್ಸ್ ಫಿಟ್ಟರ್ ಮತ್ತು ಗಾರೆ ಕಸುಬಿನ ಪವರ್ ಉಪಕರಣಗಳನ್ನು ಉಚಿತವಾಗಿ ಪಡೆಯಲು ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಂದ ಆನ್‌ಲೈನ್ (ವೆಬ್ ಸೈಟ್ hಣಣಠಿs://ಞoಜಚಿgu.ಟಿiಛಿ.iಟಿ/eಟಿ/ಚಿಠಿಠಿಟiಛಿಚಿಣioಟಿ-ಜಿoಡಿ-ಜಿಡಿee-ಣooಟಞiಣs-ಜಿoಡಿ-ಡಿuಡಿಚಿಟ-ಚಿಡಿಣisಚಿಟಿs-ಜuಡಿiಟಿg-ಣhe-ಥಿeಚಿಡಿ-೨೦೨೪-೨೫) ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ತಾ. ೩೦ ಕೊನೆಯ ದಿನವಾಗಿದೆ.
ಅರ್ಜಿಯೊಂದಿಗೆ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ, ಜಾತಿ ಪ್ರಮಾಣ ಪತ್ರ (ಎಸ್‌ಸಿ, ಎಸ್‌ಟಿ, ಮೈನಾರಿಟಿ), ಪಡಿತರ ಚೀಟಿ (ರೇಷನ್ ಕಾರ್ಡ್ ಪ್ರತಿ). ಮತದಾರರ ಗುರುತಿನ ಪ್ರತಿ. ವಿಶೇಷಚೇತನರಾಗಿದ್ದಲ್ಲಿ ದೃಢೀಕರಣ ಪತ್ರ ಸಲ್ಲಿಸುವುದು. ಆಯಾಯ ಗ್ರಾಮ ಪಂಚಾಯಿತಿಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವರಿಂದ ವೃತ್ತಿ ಮಾಡುತ್ತಿರುವ ಬಗ್ಗೆ ದೃಢೀಕರಣ. (ಟೈಲರಿಂಗ್, ಪ್ಲಂಬರ್ - ಸ್ಯಾನಿಟರಿ, ಸಿರಾಮಿಕ್ ಟೈಲ್ಸ್ ಫಿಟ್ಟರ್ ಮತ್ತು ಗಾರೆ ಕಸುಬು -ನಿಗದಿತ ನಮೂನೆಯಲ್ಲಿ)
ವಿದ್ಯುತ್ ಚಾಲಿತ ಹೊಲಿಗೆಯಂತ್ರ (ಟೈಲರಿಂಗ್) ಪ್ಲಂಬರ್ ಮತ್ತು ಸ್ಯಾನಿಟರಿ, ಸಿರಾಮಿಕ್ ಟೈಲ್ಸ್ ಫಿಟ್ಟರ್ ಮತ್ತು ಗಾರೆಕಸುಬಿನ ಉಪಕರಣ ಪಡೆಯಲು ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸತಕ್ಕದ್ದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಟೈಲರಿಂಗ್ ೧೮-೫೦ ವರ್ಷ, ಪ್ಲಂಬರ್ ಮತ್ತು ಸ್ಯಾನಿಟರಿ, ಟೈಲ್ಸ್ ಫಿಟ್ಟರ್ ಮತ್ತು ಗಾರೆಕೆಲಸ ೧೮-೬೦ ವರ್ಷ, ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಉಪ ನಿರ್ದೇಶಕರು (ಖಾಗ್ರಾ), ಗ್ರಾಮೀಣ ಕೈಗಾರಿಕೆ ಕಚೇರಿಯಿಂದ ಈಗಾಗಲೇ ಹಿಂದಿನ ೫ ವರ್ಷಗಳಲ್ಲಿ ಉಚಿತ ಸುಧಾರಿತ ಉಪಕರಣ ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ.
ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು (ಗ್ರಾ.ಕೈ) ರವರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರ್ ರಸ್ತೆ, ಮಡಿಕೇರಿ ರವರನ್ನು ಖದ್ದಾಗಿ ಅಥವಾ ದೂರವಾಣಿ ಸಂಖ್ಯೆ ೦೮೨೭೨-೨೨೮೧೧೩, ೯೭೪೧೪೫೩೦೩೮ ಮೂಲಕ ಕಚೇರಿ ವೇಳೆಯಲ್ಲಿ ಸಂಪರ್ಕಿಸ ಬಹುದು ಎಂದು ಗ್ರಾಮೀಣ ಕೈಗಾರಿಕಾ ವಿಭಾಗದ ಉಪನಿರ್ದೇಶಕರು ತಿಳಿಸಿದ್ದಾರೆ.