ಮಡಿಕೇರಿ, ನ. ೧೧: ಜಿಲ್ಲೆಯಲ್ಲಿ ಸುಸ್ಥಿರ ಪ್ರವಾಸೋದ್ಯಮಕ್ಕೆ ಹೋಂಸ್ಟೇ ಮಾಲೀಕರ ಸಹಕಾರ ಅತ್ಯಗತ್ಯವಾಗಿದ್ದು, ಕೆಲವೊಂದು ಬದಲಾವಣೆಯೊಂದಿಗೆ ಮುನ್ನಡೆದರೆ ಪ್ರವಾಸೋದ್ಯಮ ಉತ್ತುಂಗಕ್ಕೆ ಏರುತ್ತದೆ ಎಂದು ಗಣ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳ ಅಭಿಮತ ವ್ಯಕ್ತಪಡಿಸಿದರು.
ನಗರದ ಮಯೂರ ವ್ಯಾಲಿ ವ್ಯೂ ಸಭಾಂಗಣದಲ್ಲಿ ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ (ಎಂಎಸ್ಎAಇ) ಮಂಗಳೂರು ವಲಯ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಕ್ಯಾಟಲಿಸ್ಟ್ ಫಾರ್ ವುಮೆನ್ ಎಂಟರ್ಪ್ರಿನರ್ಶಿಪ್ ಮಂಗಳೂರು ವಿಭಾಗದ ವತಿಯಿಂದ ಉದ್ಯಮಶೀಲತ ಜಾಗೃತಿ ಕಾರ್ಯಕ್ರಮ ನಡೆಯಿತು.
ಪ್ರವಾಸೋದ್ಯಮ ವಲಯದ ಬೆಳವಣಿಗೆ ಅನುಸರಿಸಬೇಕಾದ ಕ್ರಮ, ಅಳವಡಿಸಿಕೊಳ್ಳಬಹುದಾದ ವಿಚಾರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ಒದಗಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಹೋಂಸ್ಟೇ ಮಾಲೀಕರು ಆಗಮಿಸಿದ್ದರು.
ದೇಶದ ಪ್ರಗತಿಯಲ್ಲಿ ಪ್ರವಾಸೋದ್ಯಮದ ಪಾತ್ರ ಅಪಾರ - ಅನಿತಾ
ಪ್ರವಾಸೋದ್ಯಮ ಕೇವಲ ಉದ್ಯಮಿಗಳಿಗೆ ಮಾತ್ರ ಆರ್ಥಿಕ ಶಕ್ತಿ ನೀಡುತ್ತಿಲ್ಲ. ದೇಶದ ಪ್ರಗತಿಯಲ್ಲಿಯೂ ಮಹತ್ತರ ಪಾತ್ರ ವಹಿಸಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಅನಿತಾ ಭಾಸ್ಕರ್ ಹೇಳಿದರು.
ದೇಶದಲ್ಲಿ ಶೇ ೧೪ರಷ್ಟು ಉದ್ಯೋಗ ಪ್ರವಾಸೋದ್ಯಮ ವಲಯದಿಂದ ಸೃಷ್ಟಿಯಾಗುತ್ತಿದೆ. ಕೊಡಗು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಪ್ರವಾಸೋದ್ಯಮವನ್ನು ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದಕ್ಕಾಗಿ ವೆಬ್ಸೈಟ್ ವಿನ್ಯಾಸ ಮಾಡಲಾಗಿದೆ. ಕಾಫಿ ಟೇಬಲ್ ಪುಸ್ತಕ ಹೊರತರುತ್ತಿದ್ದೇವೆ. ಹೋಂಸ್ಟೇಗಳು ವ್ಯವಸ್ಥಿತ ಹಾಗೂ ನಾವಿನ್ಯತೆಯಿಂದ ಕೂಡಿರಬೇಕು. ‘ವೆಲ್ನೆಸ್’ ಚಟುವಟಿಕೆ ಮೂಲಕ ಆರ್ಥಿಕವಾಗಿ ಸದೃಢವಾಗಬಹುದು. ಡಿಜಿಟಲ್ ಯುಗದಲ್ಲಿ ಪ್ರವಾಸಿಗರೊಂದಿಗೆ ನೇರ ಸಂಪರ್ಕ ಸಾಧಿಸಲು ಸಾಧ್ಯವಿದೆ. ಇದರಿಂದ ಮಧ್ಯವರ್ತಿಗಳಿಗೆ ಕಡಿವಾಣ ಹಾಕಿ ಕಡಿಮೆ ದರದಲ್ಲಿ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಗ್ರಾಹಕರಿಗೆ ವಾಸ್ತವ್ಯ ವ್ಯವಸ್ಥೆ ಕಲ್ಪಿಸಬಹುದು ಎಂದರು.
ಉದ್ಯಮ ‘ಬ್ರಾö್ಯಂಡ್’ ಆಗಿ ಬದಲಾಗಬೇಕು
ಹೋಂಸ್ಟೇ ಸಣ್ಣ ಉದ್ಯಮವಾಗಿದ್ದರೂ ಅದನ್ನು ‘ಬ್ರಾö್ಯಂಡ್’ ಆಗಿ ಸೃಷ್ಟಿಸುವ ಎಲ್ಲಾ ಅವಕಾಶಗಳೂ ಇವೆ ಎಂದು ಕ್ಯಾಟಲಿಸ್ಟ್ ಫಾರ್ ವುಮೆನ್ ಎಂಟರ್ಪ್ರಿನರ್ಶಿಪ್ ಸಂಸ್ಥೆಯ ಮಂಗಳೂರು ವಲಯ ಮುಖ್ಯಸ್ಥೆ ಸಂಗೀತ ಶಶಿಧರನ್ ತಿಳಿಸಿದರು.
ಸಣ್ಣ ಉದ್ಯಮಗಳು ಬ್ರಾö್ಯಂಡ್ ಆಗಿ ಬದಲಾಗಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮದಲ್ಲಿ ಬೆಳವಣಿಗೆ ಸಾಧಿಸಬಹುದಾಗಿದೆ. ಇದರೊಂದಿಗೆ ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿ, ಭೌಗೋಳಿಕ ಅಂಶಗಳನ್ನು ಹೋಂಸ್ಟೇ ಮಾಲೀಕರು ಬಳಸಿಕೊಳ್ಳಬೇಕು. ಜಾಗತಿಕ ಬದಲಾವಣೆಗೆ ಒಗ್ಗಿಕೊಂಡು ಉದ್ಯಮಿಗಳು ಬದಲಾಗಬೇಕು. ತಂತ್ರಜ್ಞಾನದ ಅಗತ್ಯತೆ ಅರಿತು ಮುನ್ನಡೆಯಬೇಕು. ಸಂಘಟನಾತ್ಮಕವಾಗಿರುವುದರಿAದ ಉದ್ಯಮಕ್ಕೆ ಸಹಕಾರಿಯಾಗಿರುತ್ತದೆ ಎಂದು ಪ್ರತಿಪಾದಿಸಿದರು.
ಪರಿಸರ ಸ್ನೇಹಿಯೊಂದಿಗೆ ಸಾಮಾಜಿಕ ಸ್ನೇಹಿಯಾಗಬೇಕು
ಹೋಂಸ್ಟೇಗಳು ಪರಿಸರ ಸ್ನೇಹಿಯೊಂದಿಗೆ ಸಾಮಾಜಿಕ ಸ್ನೇಹಿಯಾಗಿರಬೇಕು. ವೈಯಕ್ತಿಕ ಬೆಳವಣಿಗೆಯೊಂದಿಗೆ ನಮ್ಮ ಗ್ರಾಮ, ತಾಲೂಕು, ಜಿಲ್ಲೆಯ ಅಭಿವೃದ್ಧಿ ಮಾಡುತ್ತೇವೆ ಎಂಬ ಚಿಂತನೆಯನ್ನು ಹೊಂದಬೇಕೆAದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಕೀರ್ತಿ ನಕ್ರೆ ಕರೆ ನೀಡಿದರು.
ಎಲ್ಲಾ ವರ್ಗದವರನ್ನು ಮನದಲ್ಲಿಟ್ಟುಕೊಂಡು ಹೋಂಸ್ಟೇ ನಡೆಸಬೇಕು. ಪ್ರವಾಸಿಗರು ಇಂದು ಕೇವಲ ವಾಸ್ತವ್ಯಕ್ಕೆ ಬರುತ್ತಿಲ್ಲ. ವಿನೂತನ ಅನುಭವ ಪಡೆಯುವ ಉದ್ದೇಶ ಹೊಂದಿದ್ದಾರೆ. ಇದನ್ನು ಸೃಷ್ಟಿಸುವ ಜವಾಬ್ದಾರಿ ಪ್ರವಾಸೋದ್ಯಮಿಗಳ ಮೇಲಿರುತ್ತದೆ. ಸುಸ್ಥಿರ ಉದ್ಯಮದ ಮೂಲಕ ನಮ್ಮ ಗ್ರಾಮ, ತಾಲೂಕನ್ನು ಅಭಿವೃದ್ಧಿಪಡಿಸಿ ಸಾಮಾಜಿಕ ಬದಲಾವಣೆ ತರಲು ಸಾಧ್ಯವಿದೆ. ಪ್ರವಾಸೋದ್ಯಮ ಬೆಳವಣಿಗೆಯಿಂದ ಸ್ಥಳೀಯ ವ್ಯಾಪಾರಿಗಳಿಗೂ ಸಹಕಾರಿಯಾಗಿ ರುತ್ತದೆ. ನೀರಿನ ಬಳಕೆ, ತ್ಯಾಜ್ಯ ವಿಲೇವಾರಿ, ಸೌರಶಕ್ತಿ ಬಳಕೆಯ ಬಗ್ಗೆ ಮುತುವರ್ಜಿ ವಹಿಸಬೇಕು. ಪ್ರವಾಸಿಗರ ರಕ್ಷಣೆ ಆದ್ಯತೆಯಾಗಿರಬೇಕು ಎಂದು ತಿಳಿಹೇಳಿದರು.
ತಂತ್ರಜ್ಞಾನ ಉದ್ಯಮದ ಬೆಳವಣಿಗೆಯ ಭಾಗ
ತಂತ್ರಜ್ಞಾನ ಉದ್ಯಮದ ಬೆಳವಣಿಗೆಯಲ್ಲಿ ಅತೀದೊಡ್ಡ ಭಾಗವಾಗಿದ್ದು, ಇದನ್ನು ಪರಿಣಾಮ ಕಾರಿಯಾಗಿ ಬಳಸಿಕೊಂಡು ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಉದ್ಯಮಿ ರಂಜಿನಿ ಅಭಿಮತ ವ್ಯಕ್ತಪಡಿಸಿದರು.
ತಾಂತ್ರಿಕ ಅಂಶಗಳನ್ನು ಅಳವಡಿಸಿಕೊಳ್ಳುವುದರಿಂದ ಉದ್ಯಮದಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಹೋಂಸ್ಟೇ ಮಾಲೀಕರು ಚಾಲ್ತಿಯಲ್ಲಿರುವ ಬುಕ್ಕಿಂಗ್ ವೆಬ್ಸೈಟ್ ಬಳಸಿಕೊಳ್ಳಬೇಕು. ಇದರೊಂದಿಗೆ ಸ್ವಂತ ಆ್ಯಪ್ ಹಾಗೂ ವೆಬ್ಸೈಟ್ ರಚಿಸಿ ಆ ಮೂಲಕವೂ ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಸಾಮಾಜಿಕ ಜಾಲತಾಣಗಳನ್ನು ಪರಿಣಾಮ ಕಾರಿಯಾಗಿ ಉಪಯೋಗಿಸಿಕೊಂಡು ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ವಿಪುಲ ಅವಕಾಶಗಳಿದ್ದು, ಒಮ್ಮೆ ಭೇಟಿ ನೀಡಿದ ಪ್ರವಾಸಿಗರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕವಿಟ್ಟುಕೊAಡು ನಿಮ್ಮನ್ನು ಮರೆಯದಂತೆ ನೋಡಿಕೊಳ್ಳ ಬಹುದು. ಹೋಂಸ್ಟೇ ಉದ್ಯಮದಲ್ಲಿ ತಂತ್ರಜ್ಞಾನ ಬಳಸಿಕೊಂಡು ಹೊಸ ಅನುಭವ ನೀಡುವಂತಾಗಬೇಕು. ದತ್ತಾಂಶಗಳ ಕ್ರೋಢಿಕರಣದಿಂದ ವ್ಯಾಪಾರದ ಏರಿಳಿತ ಅರಿಯಬಹುದು ಎಂದು ಮಾಹಿತಿ ಒದಗಿಸಿದರು.
ಚೆಲುವು ನ್ಯಾಚುರಲ್ಸ್ ಸ್ಥಾಪಕಿ ರೇಷ್ಮಾ ಶ್ರೀನಿವಾಸನ್ ಮಾತನಾಡಿ, ಟ್ರಕ್ಕಿಂಗ್, ಪ್ಲಾಂಟೇಷನ್ ಟೂರ್ನಂತಹ ಅನುಭವವನ್ನು ಪ್ರವಾಸಿಗರಿಗೆ ನೀಡಿದರೆ ಆದಾಯ ಪಡೆಯಬಹುದು. ಗೂಗಲ್ ಅನ್ನು ಬಳಸಿಕೊಂಡು ಪ್ರಪಂಚ ವ್ಯಾಪಿ ಪ್ರವಾಸಿಗರನ್ನು ಸೆಳೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಧ್ಯಕ್ಷೆ ಮೋಂತಿ ಗಣೇಶ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ಹೋಂಸ್ಟೇ ಮಾಲೀಕರು ಹಾಜರಿದ್ದರು.