ಕುಶಾಲನಗರ, ನ. ೧೨: ಅಖಿಲ ಭಾರತ ಸನ್ಯಾಸಿಗಳ ಸಂಘ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ತಲಕಾವೇರಿಯಿಂದ ಚಾಲನೆಗೊಂಡ ೧೪ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆ ತಾ. ೧೩ರಂದು (ಇಂದು) ತಮಿಳುನಾಡಿನ ಪೂಂಪ್‌ಹಾರ್ ಬಂಗಾಳಕೊಲ್ಲಿ ಕಾವೇರಿ ನದಿ ಸಮುದ್ರ ಸಂಗಮದ ಬಳಿ ಸಮಾರೋಪಗೊಳ್ಳಲಿದೆ.

ಅಕ್ಟೋಬರ್ ೨೦ರಂದು ತಲಕಾವೇರಿಯಿಂದ ಪವಿತ್ರ ತೀರ್ಥ ಕಲಶಗಳೊಂದಿಗೆ ಸಾಗಿದ ಯಾತ್ರೆ ಕರ್ನಾಟಕ ತಮಿಳುನಾಡು ವ್ಯಾಪ್ತಿಯ ಕಾವೇರಿ ನದಿ ತಟಗಳ ವ್ಯಾಪ್ತಿಯ ಜನರಲ್ಲಿ ನದಿ ಸಂರಕ್ಷಣೆ ಬಗ್ಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಧು ಸಂತರ ತಂಡ ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ನಡೆದಿದ್ದು, ತಮಿಳುನಾಡು ಮೈಲಾಡುದುರೈ ಬಳಿಯ ಪೂಂಪ್‌ಹಾರ್ ಸಮುದ್ರ ಸಂಗಮದ ಪೂರ್ಣೇಶ್ವರಿ ದೇವಾಲಯದಲ್ಲಿ ಪವಿತ್ರ ತೀರ್ಥ ಕಲಶಗಳಿಗೆ ವಿಶೇಷ ಪೂಜಾ ಕಾರ್ಯ ನಡೆಸಿ ನಂತರ ಸಂಗಮದಲ್ಲಿ ಪವಿತ್ರ ತೀರ್ಥ ವಿಸರ್ಜನೆ ಮೂಲಕ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.