ವೀರಾಜಪೇಟೆ, ನ. ೧೨: ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಮೈದಾನದಲ್ಲಿ ನಡೆದ ರಾಷ್ಟçಮಟ್ಟದ ಅಂತರ್ ಕಾಲೇಜು ೫+೨ ಪುರುಷರ ಕಾಲ್ಚೆಂಡು ಪಂದ್ಯಾಟದಲ್ಲಿ ಬೆಳ್ತಂಗಡಿಯ ಸೆಕ್ರೇಡ್ ಹಾರ್ಟ್ ಪದವಿ ಕಾಲೇಜು ತಂಡ ಜಯಗಳಿಸಿತು.

ಕುಶಾಲನಗರದ ಅನುಗ್ರಹ ಪದವಿ ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಲೀಗ್ ಮಾದರಿಯಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ಒಟ್ಟು ೨೬ ತಂಡಗಳು ಭಾಗವಹಿಸಿದ್ದವು. ಕೇರಳ ರಾಜ್ಯದ ಮಲಪುರಂ, ಇರಿಟ್ಟಿ, ಕಣ್ಣೂರು ಜಿಲ್ಲೆಗಳ ಪದವಿ ಕಾಲೇಜು ತಂಡಗಳು ರಾಜ್ಯದ ಮೈಸೂರು, ಬೆಂಗಳೂರು, ದಕ್ಷಿಣ ಕನ್ನಡ, ಮಂಗಳೂರು ಜಿಲ್ಲೆಗಳ ಪದವಿ ಕಾಲೇಜು ತಂಡಗಳು ಹಾಗೂ ಕೊಡಗು ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ ತಂಡಗಳು ಪಾಲ್ಗೊಂಡಿದ್ದವು.

ಪ್ರಥಮ ಸೆಮಿ ಫೈನಲ್ ಪಂದ್ಯ ಅನುಗ್ರಹ ಪದವಿ ಕಾಲೇಜು ಕುಶಾಲನಗರ ತಂಡ ಮತ್ತು ಮಹಾಜನಸ್ ಪದವಿ ಕಾಲೇಜು ಮೈಸೂರು ತಂಡಗಳ ಮಧ್ಯೆ ನಡೆದು ೨-೦ ಗೋಲುಗಳಿಂದ ಅನುಗ್ರಹ ಪದವಿ ಕಾಲೇಜು ಫೈನಲ್ ಹಂತಕ್ಕೆ ತಲುಪಿತು. ದ್ವಿತೀಯ ಸೆಮಿ ಫೈನಲ್ ಪಂದ್ಯಾಟವು ಸೆಕ್ರೇಡ್ ಹಾರ್ಟ್ ಪದವಿ ಕಾಲೇಜು ಬೆಳ್ತಂಗಡಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಪೋಕ್ಲು ತಂಡಗಳ ಮಧ್ಯೆ ನಡೆದು ೩-೨ ಗೋಲುಗಳಿಂದ ಸೆಕ್ರೇಡ್ ಹಾರ್ಟ್ ಪದವಿ ಕಾಲೇಜು ತಂಡ ಫೈನಲ್ ಪ್ರವೇಶ ಮಾಡಿತು. ತೃತೀಯ ಸ್ಥಾನಕ್ಕೆ ನಾಪೋಕ್ಲು ತಂಡ ಮತ್ತು ಮಹಾಜನಾಸ್ ಮೈಸೂರು ತಂಡಗಳ ಮಧ್ಯೆ ಪಂದ್ಯ ನಡೆದು ಪೆನಾಲ್ಟಿ ಶೂಟೌಟ್‌ನಲ್ಲಿ ೩-೨ ಗೋಲುಗಳಿಂದ ಮಹಾಜನಾಸ್ ಮೈಸೂರು ತಂಡ ಜಯಗಳಿಸಿತು.

ಫೈನಲ್ ಪಂದ್ಯಾಟ ಅನುಗ್ರಹ ಪದವಿ ಕಾಲೇಜು ಕುಶಾಲನಗರ ಮತ್ತು ಸೆಕ್ರೇಡ್ ಹಾರ್ಟ್ ಪದವಿ ಕಾಲೇಜು ಬೆಳ್ತಂಗಡಿ ತಂಡಗಳ ಮಧ್ಯೆ ನಡೆದು, ಬೆಳ್ತಂಗಡಿ ತಂಡ ಪ್ರಥಮಾರ್ಧದಲ್ಲಿ ೨ ಗೋಲು, ದ್ವಿತೀಯಾರ್ಧದಲ್ಲಿ ಎರಡು ಗೋಲುಗಳಿಂದ ಮುನ್ನಡೆ ಸಾಧಿಸಿತು. ಕುಶಾಲನಗರ ತಂಡ ಒಂದು ಗೋಲು ಮಾತ್ರ ಬಾರಿಸಿತು. ವಿಜೇತ ತಂಡಗಳಿಗೆ ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.

ಅನುಗ್ರಹ ಪದವಿ ಕಾಲೇಜಿನ ಆಫ್ರೀದ್ ಉತ್ತಮ ಡಿಫೇಂಡರ್ ಪ್ರಶಸ್ತಿ, ಸರಣಿ ಪುರುಷೋತ್ತಮ ಪ್ರಶಸ್ತಿ ಶಾವದ್ ನಾಪೋಕ್ಲು, ಹೆಚ್ಚು ಗೋಲು ಪ್ರಶಸ್ತಿಯನ್ನು ಸೆಕ್ರೇಡ್ ಹಾರ್ಟ್ ವಿನು, ಉತ್ತಮ ಗೋಲಿ ಪ್ರಶಸ್ತಿಯನ್ನು ಶೀಜು ಸೆಕ್ರೇಡ್ ಹಾರ್ಟ್, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಸೆಕ್ರೇಡ್ ಹಾರ್ಟ್ ತನ್ವೀರ್ ಪಡೆದುಕೊಂಡರು.

ಶೇಷಪ್ಪ ಅಮ್ಮತ್ತಿ, ಶ್ರೀನಿವಾಸ್, ರದೀಶ್ ಒಂಟಿಯAಗಡಿ ತೀರ್ಪು ಗಾರರಾಗಿ ಕಾರ್ಯನಿರ್ವಹಿಸಿದರು. ಸಂತ ಅನಮ್ಮ ಪದವಿ ಕಾಲೇಜಿನ ಬಿ.ಬಿ.ಎ ವಿಭಾಗ ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರು, ಪದವಿ ಕಾಲೇಜಿನ ವಿಧ್ಯಾರ್ಥಿಗಳು, ವಿವಿಧ ಕಾಲೇಜುಗಳು ದೈಹಿಕ ಶಿಕ್ಷಕರುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಂದ್ಯಾಟದಲ್ಲಿ ಹಾಜರಿದ್ದರು.