ಮಡಿಕೇರಿ, ನ. ೧೨: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ವೆಲ್ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ನ.೧೪ ರಂದು (ನಾಳೆ) “ಅರೆಕಾಡು- ಹೊಸ್ಕೇರಿ ನಾಡೊರ್ಮೆ ಕಾರ್ಯಕ್ರಮ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಕುಕ್ಕೆರ ಜಯ ಚಿಣ್ಣಪ್ಪ ತಿಳಿಸಿದ್ದಾರೆ.
ಅರೆಕಾಡು ಗ್ರಾಮದ ರಿಯಾವರ್ ರೆಸಾರ್ಟ್ನಲ್ಲಿ ಬೆಳಿಗ್ಗೆ ೯ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರು ಕೊಡವ ವೆಲ್ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ನ ನೂತನ ಕಟ್ಟಡಕ್ಕೆ ಅರೆಕಾಡುವಿನಲ್ಲಿ ಭೂಮಿಪೂಜೆ ನೆರವೇರಿಸಲಿದ್ದಾರೆ.
ಸಭಾ ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟರಾಜ, ಸರ್ಕಾರಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹಾಗೂ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಮೈಸೂರಿನ ‘ಪಡಿಪು ಕಯ್ಯಾಲೆ’ ತಂಡÀ ಸ್ವಾಗತ ನೃತ್ಯ, ಉಮ್ಮತ್ತಾಟ್, ಕೊಡವ ನೃತ್ಯಗಳನ್ನು ಪ್ರದರ್ಶಿಸಲಿರುವರು. ಉರ್‌ಟಿಕೊಟ್ಟ್ ಆಟ್, ಬಾಳೋಪಾಟ್, ಬೊಳಕಾಟ್, ಕತ್ತಿಯಾಟ್, ಚೋದ್ಯ-ಚೋದ್ ಇರುವುದು. ಅಕಾಡೆಮಿಯ ತ್ರೆöÊಮಾಸಿಕ ಸಂಚಿಕೆ ‘ಕೊಡವೋಲೆ’ಯನ್ನು ಬಿಡುಗಡೆ ಮಾಡಲಾಗುವುದು. ಕೊಡವ ಸಂಸ್ಕೃತಿ, ಸಾಹಿತ್ಯ ಹಾಗೂ ಸಮಾಜಕ್ಕೆ ಕಾಣಿಕೆ ನೀಡಿರುವ ಸ್ಥಳೀಯ ಗಣ್ಯರನ್ನು ಸನ್ಮಾನಿಸಲಾಗುವುದು.
“ಕೊಡವಡ ಮಾಲ್-ಮಟ ಚಿಂಗಾರ” ವಿಷಯದ ಕುರಿತು ಸಾಹಿತಿ ಡಾ.ಮುಲ್ಲೇಂಗಡ ರೇವತಿ ಪೂವಯ್ಯ ವಿಚಾರ ಮಂಡನೆ ಮಾಡಲಿದ್ದಾರೆ. “ಕೊಡವ ವೆಲ್ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್” ಉಪಾಧ್ಯಕ್ಷ ಬಲ್ಲಚಂಡ ವಿಠಲ್ ಕಾವೇರಪ್ಪ ಅವರು “ಅರೆಕಾಡು-ಹೊಸ್ಕೇರಿ ಕೋವುಲ್ ಕೊಡವಡ ನೇರ್ ನೆಲೆ’ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಕುಕ್ಕೆರ ಜಯ ಚಿಣ್ಣಪ್ಪ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.