ಸೋಮವಾರಪೇಟೆ, ನ. ೧೨: ಚಂದ್ರೋದಯ ಯುವಕ ಸಂಘ, ಸ್ವ ಸಹಾಯ ಸಂಘಗಳು ಹಾಗೂ ಹಾನಗಲ್ಲು ಶೆಟ್ಟಳ್ಳಿ ಗ್ರಾಮಸ್ಥರು ಇವರುಗಳ ಸಂಯುಕ್ತಾಶ್ರಯದಲ್ಲಿ ಪುರುಷರ ಅಂತರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ೩೩ನೇ ವರ್ಷದ ಗ್ರಾಮೀಣ ಕ್ರೀಡಾಕೂಟ ತಾ ೧೪ರಂದು (ನಾಳೆ) ನಡೆಯಲಿದೆ ಎಂದು ಯುವಕ ಸಂಘದ ಅದ್ಯಕ್ಷ ಪವನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಕೂಟ ಹಾನಗಲ್ಲು ಶೆಟ್ಟಳ್ಳಿಯ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಅಂದು ಬೆಳಿಗ್ಗೆ ೯ಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎಂ. ನಾಗರಾಜು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಾನಗಲ್ಲು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಿಥುನ್ ಹಾನಗಲ್ಲು, ಡಿ.ಎಸ್. ಸುರೇಶ್, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ನತೀಶ್ ಮಂದಣ್ಣ, ಪ್ರಮುಖರಾದ ನಾಪಂಡ ಮುತ್ತಪ್ಪ, ಸಿದ್ಧಲಿಂಗಪುರದ ರಾಮಣ್ಣ, ಕೊತ್ತನಳ್ಳಿ ಅರುಣ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಸಂಜೆ ೬ ಗಂಟೆಗೆ ನಡೆಯಲಿದೆ. ಹಾನಗಲ್ಲು ಗ್ರಾಮ ಸಮಿತಿ ಅಧ್ಯಕ್ಷ ಎಲ್.ಬಿ. ಉಲ್ಲಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ಶಾಸಕ ಡಾ, ಮಂತರ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಪ್ರಮುಖರಾದ ಮಹೇಶ್ ತಿಮ್ಮಯ್ಯ, ಸುದೀಪ್, ಡಿಯು. ಕಿರಣ್, ಡಿ.ಇ. ಪವನ್, ಬಿ.ಜೆ. ದೀಪಕ್, ಸಚಿನ್ ಉಪಸ್ಥಿತರಿರುವರು.
ಪುರುಷರಿಗೆ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ, ಪುರುಷರಿಗೆ ಕಬಡ್ಡಿ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆ, ಮಹಿಳೆಯರಿಗೆ ಹಗ್ಗಜಗ್ಗಾಟ ಮತ್ತು ವಿಷದ ಚೆಂಡು, ೫೦ ವರ್ಷ ಮೇಲ್ಪಟ್ಟ ಪರುಷರು ಮತ್ತು ಮಹಿಳೆಯರಿಗೆ ಮಡಿಕೆ ಒಡೆಯುವ ಸ್ಪರ್ಧೆ ನಡೆಯುವುದು.
ವಾಲಿಬಾಲ್ ವಿಜೇತ ತಂಡಕ್ಕೆ ರೂ. ೧೫ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ. ೧೦ ಸಾವಿರ ಹಾಗೂ ತೃತೀಯ ಬಹುಮಾನ ರೂ. ೫ ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು. ತಂಡವನ್ನು ನೋಂದಾಯಿಸಿಕೊಳ್ಳಲು ನ. ೧೩ ಕೊನೆಯ ದಿನವಾಗಿದ್ದು, ಸಂಜೆ ೪ ಗಂಟೆಯೊಳಗೆ ನೋಂದಾಯಿಸಿಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗಾಗಿ ೮೨೭೭೨೭೮೮೦೬ ಮತ್ತು ೯೪೪೯೬೮೨೬೦೬ ಸಂಪರ್ಕಿಸಲು ಮನವಿ ಮಾಡಿದ್ದಾರೆ. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಚಲನ, ಕಾರ್ಯದರ್ಶಿ ಸಚಿನ್, ಖಜಾಂಚಿ ಅಭಿನವ್, ಸದಸ್ಯ ಶೋಭರಾಜ್ ಇದ್ದರು.