ಮಡಿಕೇರಿ, ನ. ೧೨: ಎರಡು ದಿನಗಳಿಂದೀಚೆಗೆ ಏರ್‌ಟೆಲ್ ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ. ಕರೆ ಮಾಡಿದರೆ ತಡವಾಗಿ ಕನೆಕ್ಟ್ ಆಗುವುದು, ಕನೆಕ್ಟ್ ಆದರೆ ಮಾತು ಸ್ಪಷ್ಟವಾಗಿ ಕೇಳಿಸದಿರುವುದು, ವಾಟ್ಸಾಪ್ ಹಾಗೂ ಟೆಕ್ಸ್÷್ಟ ಮೆಸೇಜ್‌ಗಳು ತಡವಾಗಿ ವಿನಿಮಯವಾಗುವುದು ಸೇರಿದಂತೆ ಇಂಟರ್ ನೆಟ್ ಸೇವೆಗಳ ವೇಗವೂ ಕಡಿಮೆಯಾಗಿದ್ದು, ಗ್ರಾಹಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಏರ್ ಟೆಲ್ ಟವರ್ ನಲ್ಲಿ ಉಂಟಾಗಿರುವ ತಾಂತ್ರಿಕ ದೋಷದಿಂದ ಏರ್‌ಟೆಲ್ ಸಿಮ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನಲಾಗಿದ್ದು ಇನ್ನೂ ಎರಡು ದಿನಗಳ ಕಾಲ ಈ ಸಮಸ್ಯೆ ಮುಂದುವರಿಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಬಿಎಸ್‌ಎನ್‌ಎಲ್ ಸಿಮ್‌ನಲ್ಲೂ ಕೂಡ ಆಗಿಂದಾಗ್ಗೆ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತಿರುವುದಾಗಿ ಹಲವು ಗ್ರಾಹಕರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.