ಸೋಮವಾರಪೇಟೆ, ನ. ೧೨: ವಕ್ಫ್ ಗೊಂದಲಗಳು ಪರಿಹಾರವಾಗ ಬೇಕಾದರೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಕ್ಫ್ ಮಂಡಳಿಯನ್ನು ವಜಾಗೊಳಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಆಗ್ರಹಿಸಿದ್ದಾರೆ.

ಪಟ್ಟಣದ ಸಫಾಲಿ ಸಭಾಂಗಣದಲ್ಲಿ ನಡೆದ ರೈತ ಸಂಘದ ಸದಸ್ಯರುಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಕ್ಫ್ ಸಂಬAಧಿತ ಇತ್ತೀಚಿನ ಬೆಳವಣಿಗೆಗಳಿಂದ ರೈತರಿಗೆ ಸಮಸ್ಯೆಯಾದರೆ ತೀವ್ರ ತರಹದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ವಕ್ಫ್ ಮೂಲಕ ನೀಡುತ್ತಿರುವ ನೋಟೀಸ್‌ಗಳನ್ನು ತಡೆಹಿಡಿಯುವುದೂ ಸೇರಿದಂತೆ ರೈತರ ಜಾಗ ತೆರವುಗೊಳಿಸದಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ನಿರ್ದೇಶನಗಳು ಕೇವಲ ಆದೇಶಕ್ಕೆ ಸೀಮಿತವಾಗದೇ, ಕ್ಯಾಬಿನೆಟ್ ಶಾಸನ ಬದ್ಧಗೊಳಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಂಬAಧಿಸಿದAತೆ ಸರ್ಕಾರ ಹೊಸ ಸುತ್ತೋಲೆ ಹೊರಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.