ಕೂಡಿಗೆ, ನ. ೧೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಕೂಡಿಗೆ ವಿಭಾಗದ ಸಹಾಯಕ ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಇಸ್ಮಾಯಿಲ್ ಅತ್ತಾರ ಎಂಬವರು ವಿದ್ಯುತ್ ಸುರಕ್ಷತೆಯ ಬಗ್ಗೆ, ವಿದ್ಯುತ್‌ನಿಂದ ಆಗುವ ಅನಾಹುತಗಳು ಮತ್ತು ಅವಘಡಗಳ ಕುರಿತು ಅರಿವು ಮೂಡಿಸಿದರು.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಕಣಿವೆ, ಜೇನುಕಲ್ಲು ಬೆಟ್ಟದ ಶಾಲೆ, ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಇಸ್ಮಾಯಿಲ್ ಅತ್ತಾರ ವಿದ್ಯುತ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಈ ಸಂದರ್ಭ ವಿವಿಧ ಶಾಲಾ ಶಿಕ್ಷಕರು, ಇಲಾಖೆಯ ನೌಕರರ ವೃಂದದವರು ಹಾಜರಿದ್ದರು.