ಪೊನ್ನಂಪೇಟೆ, ನ. ೧೨: ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ೨೦೨೪-೨೫ ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ತಾ.೧೩ ರಿಂದ ೧೯ ರವರೆಗೆ ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲ ಎಸ್. ಎಸ್. ಮಾದಯ್ಯ ತಿಳಿಸಿದ್ದಾರೆ.
ತಾ. ೧೩ ರಂದು ಮಧ್ಯಾಹ್ನ ೨.೩೦ ಕ್ಕೆ ಶಿಬಿರದ ಉದ್ಘಾಟನೆಯನ್ನು ಗೋಣಿಕೊಪ್ಪಲು ಕಾವೇರಿ ಎಜುಕೇಶನ್ ಸೊಸೈಟಿಯ ನಿರ್ದೇಶಕರಾದ ಕುಪ್ಪಂಡ ಎಂ. ಬೆಳ್ಳಿಯಪ್ಪ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ಮಾಜಿ ಸೈನಿಕ ಕ್ಯಾಪ್ಟನ್ ವಿ. ಕೆ. ಮೋಹನ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಿಶೋರ್ ನಾಚಪ್ಪ, ತೂಚಮಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸುಬ್ರಮಣಿ ಹೆಚ್.ಎನ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಗೀತಾ ಭಾಗವಹಿಸಲಿದ್ದಾರೆ.