ಚೆಟ್ಟಳ್ಳಿ, ನ. ೧೨: ಪ್ರಕೃತಿಯಲ್ಲಿ ಜೇನಿನ ಪಾತ್ರ ಅತೀ ಮುಖ್ಯವಾಗಿದ್ದು, ಜೇನು ಕೃಷಿಯಿಂದ ಹೆಚ್ಚಿನ ಆದಾಯವನ್ನು ಪಡೆಯಬಹುದೆಂದು ಗೋಣಿಕೊಪ್ಪ ಕಾಫಿ ಮಂಡಳಿಯ ವಿಸ್ತರಣಾ ಉಪನಿರ್ದೇಶಕಿ ಡಾ. ಶ್ರೀದೇವಿ ಹೇಳಿದರು. ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯ ಮೂಲಕ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಚೆಟ್ಟಳ್ಳಿಯಲ್ಲಿ ನಡೆದ ವೈಜ್ಞಾನಿಕ ಜೇನು ಕೃಷಿ ಸಾಕಾಣಿಕೆ ಹಾಗೂ ಜೇನುನೊಣ ನಿರ್ವಹಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಶ್ರೀದೇವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೇಂದ್ರದ ಮುಖ್ಯಸ್ಥ ಡಾ. ರಾಜೇಂದಿರನ್ ಮಾತನಾಡಿ, ಜೇನು ಕೃಷಿಗೆ ಹೆಚ್ವಿನ ಒತ್ತು ನೀಡುವ ಉದ್ದೇಶದಿಂದ ಜೇನು ಕೃಷಿ ತರಬೇತಿ ನೀಡಲಾಗುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ವೇದಿಕೆಯಲ್ಲಿ ವಿಜ್ಞಾನಿಗಳಾದ ಡಾ. ಮುರುಳಿಧರ್, ಡಾ. ನಯನ್ ದೀಪಕ್ ಜಿ., ಡಾ. ರಾಣಿ ಎ.ಟಿ. ಹಾಜರಿದ್ದರು. ಕಾರ್ಯಾಗಾರದ ಅಂಗವಾಗಿ ಕೀಟ ವಿಜ್ಞಾನಿ ಡಾ. ರಾಣಿ ಜೇನು ಕೃಷಿಯ ಬಗ್ಗೆ ತರಬೇತಿ ನೀಡಿದರು. ಕೃಷಿಕರಿಗೆ ಜೇನು ಪೆಟ್ಟಿಗೆ ಹಾಗೂ ವಿವಿಧ ಪರಿಕರವನ್ನು ವಿತರಿಸಿದರು.
ಐಐಹೆಚ್‌ಆರ್ ಗೀತೆಯೊಂದಿಗೆ ಕಾರ್ಯಾಗಾರ ಪ್ರಾರಂಭಗೊAಡು ಕೀಟ ವಿಜ್ಞಾನಿ ಡಾ. ರಾಣಿ ಎ.ಟಿ. ಸ್ವಾಗತಿಸಿ, ಚೈತ್ರ ನಿರೂಪಿಸಿ, ವಿಜ್ಞಾನಿ ಡಾ. ಮುರುಳಿದರ್ ಬಿ.ಎಂ. ವಂದಿಸಿದರು.