‘‘ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ
ಯದಗ್ರೇ ಸರ್ವವೇದಾಶ್ಚ
ತುಳಸಿ ತ್ವಾಂ ನಮಾಮ್ಯಹಂ’’
ಮನೆಯಲ್ಲಿ ಸರ್ವ ಸಂಪತ್ತು ನೆಲೆಸಲು ನಿತ್ಯ ಈ ತುಳಸಿ ಸ್ತೋತ್ರವನ್ನು ಹೇಳಲಾಗುತ್ತದೆ. ಅಂದರೆ ತುಳಸಿಯ ಬುಡದಲ್ಲಿ ಗಂಗಾ, ಯುಮುನ, ಗೋದಾವರಿ, ಕಾವೇರಿ, ತುಂಗ, ಭದ್ರಾ, ಕೃಷ್ಣವೇಣಿ, ಮುಂತಾದ ಸಕಲ ತೀರ್ಥಗಳ ಪಾವನೆಯರು ನೆಲೆಸಿರುವರು. ಪ್ರತಿನಿತ್ಯ ತುಳಸಿ ಗಿಡದ ಬುಡಕ್ಕೆ ಭಕ್ತಿಯಿಂದ ನೀರು ಹಾಕಿದರೆ ಸಕಲ ತೀರ್ಥಗಳ ದರ್ಶನದೊಂದಿಗೆ ಸ್ನಾನದ ಪುಣ್ಯ ಪ್ರಾಪ್ತಿಯಾಗುತ್ತದೆ.
ಎರಡನೇ ಸಾಲಿನಲ್ಲಿ -ಗಿಡದ ಮಧ್ಯ ಭಾಗ ಬ್ರಹ್ಮ, ರುದ್ರ, ಇಂದ್ರ, ಅಗ್ನಿ, ಸೂರ್ಯಚಂದ್ರರ ಸನ್ನಿಧಾನವಾಗಿದ್ದು, ಸಕಲ ಭಗವಂತನ ಅನುಚರ ದೇವತೆಗಳು ವಾಸಿಸುತ್ತಾರೆ.
ಮೂರನೇ ಸಾಲಿನಲ್ಲಿ-ತುಳಸಿಯ ಅಗ್ರ (ತಲೆ) ಭಾಗದಲ್ಲಿ ಚತುರ್ವೇದ ಅಭಿಮಾನಿಗಳು ಇದ್ದು ನಿತ್ಯವೂ ಶ್ರೀಹರಿಯನ್ನು ಸ್ತುತಿಸುತ್ತಿರುತ್ತಾರೆ. ಶ್ರೀವಿಷ್ಣು ಸ್ವತಃ ಲಕ್ಷಿö್ಮÃಸಹಿತನಾಗಿ ನೆಲೆಸಿರುತ್ತಾರೆ. ಹೀಗೆ ತುಳಸಿಯ ಪೂಜೆಯಿಂದ ಸಕಲ ಆಸೆಗಳು ನೆರವೇರುತ್ತದೆ.
ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ ಇಲ್ಲವಾದ್ದರಿಂದ ತುಳಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ವಿಷ್ಣುವು ಮದುವೆಯಾದನು. ಹಿಂದೂ ಧರ್ಮದಲ್ಲಿ ಮಹಾವಿಷ್ಣುವಿನ ಮಡದಿಯೆಂದೂ ಅವರಿಬ್ಬರಿಗೆ ನಡೆಯುವ ವಿವಾಹವನ್ನು ತುಳಸಿ ವಿವಾಹ ಎಂದು ಕರೆಯುತ್ತಾರೆ.
ಇನ್ನೊಂದು ಪುರಾಣ ಕತೆ ಪ್ರಕಾರ
ವೃಂದಾ ಎಂಬ ಹೆಸರಿನ ಯುವತಿಯೇ ತುಳಸಿಯಾಗಿ ಗಿಡದ ರೂಪ ಪಡೆದವಳು. ಈಕೆ ಜಲಂಧರನೆAಬ ದುಷ್ಟ ರಾಜನನ್ನು ಮದುವೆಯಾಗಿರುತ್ತಾಳೆ. ಅವಳು ಮಹಾವಿಷ್ಣುವಿನ ಭಕ್ತೆಯಾಗಿದ್ದು ನಿತ್ಯ ವಿಶೇಷ ಭಕ್ತಿಯಿಂದ ಆರಾಧಿಸುತ್ತಿದ್ದಳು. ಇದು ಜಲಂಧರನಿಗೆ ಇಷ್ಟವಿರಲಿಲ್ಲ. ಆತ ದೇವತೆಗಳಿಗೆ ಉಪಟಳ ನೀಡುತ್ತಿದ್ದ. ಶಿವನು ಚಿಂತಿತ ನಾಗಿ ಏನು ಮಾಡುವುದೆಂದು ವಿಷ್ಣುವಿನ ಮೊರೆ ಹೋಗುತ್ತಾನೆ. ಆಗ ವಿಷ್ಣುವು ಜಲಂಧರನ ರೂಪ ತಾಳಿ ವೃಂದಾಳ ಬಳಿಗೆ ಬಂದು ಮೋಹಿಸಿ ಆಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತಾನೆ. ಈ ಸಂದರ್ಭದಲ್ಲಿ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ. ಇತ್ತ ತನ್ನ ಚಾರಿತ್ರ್ಯಕ್ಕೆ ಧಕ್ಕೆ ತರುವ ವಿಷ್ಣುವಿಗೆ ವೃಂದಾ ಕಪ್ಪು ಕಲ್ಲಾಗಿ ಹೋಗು ಎಂದು ಶಾಪ ನೀಡುವಳಲ್ಲದೆ ನಿನಗೆ ಪತ್ನಿಯ ವಿರಹವುಂಟಾಗಲಿ ಎಂದು ಆಶಿಸುತ್ತಾಳೆ. ಇದರಿಂದ ರಾಮಾಯಣದಲ್ಲಿ ವಿಷ್ಣುವಿನ ಅವತಾರ ರಾಮನಿಗೆ ಸೀತೆಯು ಕಾಡಿನಲ್ಲಿ ಕೆಲವು ವರ್ಷಗಳ ಕಾಲ ದೂರವಾಗುತ್ತಾಳೆ. ತನ್ನ ಚಾರಿತ್ರö್ಯಕ್ಕೆ ಧಕ್ಕೆಯುಂಟಾದುದರಿAದ ವೃಂದಾ ಪತಿಯ ಚಿತೆಗೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಭೋದಿನಿ ಏಕಾದಶಿಯ ದಿನ ತುಳಸಿಯನ್ನು ಮದುವೆಯಾಗುತ್ತೇನೆ ಎಂದು ಮಾತು ಕೊಡುತ್ತಾನೆ. ಇದರ ಸಂಕೇತವೇ ವಿಷ್ಣು-ತುಳಸಿ ವಿವಾಹ. ಈ ಕಾರಣದಿಂದ ವಿಷ್ಣುವಿನ ಪೂಜೆಯಲ್ಲಿ ತುಳಸಿಯಿಲ್ಲದೆ ಪೂಜೆಯು ಅಪೂರ್ಣವೆಂದು ಹೇಳಲಾಗುತ್ತದೆ.
ಪೂಜಾ ವಿಧಾನ
ತುಳಸಿ ಕಟ್ಟೆಗೆ ರಂಗೋಲಿ, ಹೂವು, ಮಾವಿನ ಎಲೆಗಳಿಂದ ಗಿಡದ ಸುತ್ತ ದೀಪವಿಟ್ಟು ಅಲಂಕರಿಸಿ ವಿಷ್ಣುವಿನ ವಿಗ್ರಹವಿಟ್ಟು ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಪೂಜಿಸುತ್ತಾರೆ. ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನಾರಾಯಣ ಸ್ವರೂಪವೆಂದು ನಂಬಲಾಗಿದೆ. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಗೆ ಶಯನೀ ಎಂದು ಹೇಳುತ್ತಾರೆ. ಅಂದು ಕ್ಷೀರ ಸಮುದ್ರದಲ್ಲಿ ಶೇಷನಾಗನ ಹಾಸಿಗೆಯ ಮೇಲೆ ವಿಷ್ಣು ನಿದ್ರಿಸಲು ತೆರಳುತ್ತಾನೆ. ನಂತರ ಕಾರ್ತಿಕ ಮಾಸದ ಶುಕ್ಲ ಪಕ್ಷದಂದು ಎದ್ದೇಳುತ್ತಾನೆ. ವಿಷ್ಣು ನಿದ್ರಿಸುವ ನಾಲ್ಕು ತಿಂಗಳ ಈ ಅವಧಿಯನ್ನು ಚತುರ್ಮಾಸ ಎಂದು ಕರೆಯಲಾಗುವುದು. ಆಷಾಢ ಮಾಸದಲ್ಲಿ ಮಲಗಿದ ವಿಷ್ಣು ಚತುರ್ಮಾಸ ಕಳೆದು ಉತ್ಥಾನ ಏಕಾದಶಿಯಂದು ಎದ್ದೇಳುತ್ತಾನೆ. ತುಳಸಿ ದೇವಿಯನ್ನು ವಿವಾಹವಾಗುವ ಪವಿತ್ರವಾದ ದಿನವೇ ದೇವ ಉತ್ಥಾನ ದ್ವಾದಶಿ. ಈ ದಿನದ ನಂತರದಿAದ ಜನರು ಮನೆಯಲ್ಲಿ ವಿವಾಹ ಕಾರ್ಯ, ನಾಮಕರಣ, ಗೃಹ ಪ್ರವೇಶ ಸೇರಿದಂತೆ ಇನ್ನಿತರ ಶುಭ ಕಾರ್ಯಗಳನ್ನು ಕೈಗೊಳ್ಳಬಹುದು.
ಗಿಡದ ಸುತ್ತ ಮದುವೆ ಮಂಟಪ ನಿರ್ಮಿಸುವುದಕ್ಕೆ ತುಳಸಿ ಬೃಂದಾವನವೆAದು ಹೆಸರು. ವೃಂದಾಳ ಆತ್ಮವು ರಾತ್ರಿಯಿಡೀ ಇದ್ದು ಮರುದಿನ ಬೆಳಗ್ಗೆ ಹೊರಟುಹೋಗುತ್ತದೆ ಎಂಬ ನಂಬಿಕೆಯಿದೆ. ಈ ಪೂಜೆಯಿಂದ ಮನೆಯಲ್ಲಿ ಶ್ರೇಯಸು ಹೆಚ್ಚಾಗುವುದು. ಜನಪದರ ಪ್ರಕಾರ ಮನೆಯ ಮುಂದೆ ತುಳಸಿ ಗಿಡ ನೆಟ್ಟು ಬೆಳಿಗ್ಗೆ ಸಂಜೆ ನೀರು ಹಾಕಿ ಪೂಜಿಸುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳು ನಮ್ಮ ಮನೆಯ ಪರಿಸರವನ್ನು ಪ್ರವೇಶಿಸುವುದಿಲ್ಲ ಎಂಬ ನಂಬಿಕೆ.
ಸೊಳ್ಳೆ ನಿವಾರಕವಾಗಿರುವ ತುಳಸಿ ಗಿಡವು ಉತ್ತಮ ಔಷಧೀಯ ಗುಣವುಳ್ಳದ್ದು. ಮನೆಯ ಸುತ್ತಮುತ್ತ ತುಳಸಿ ಗಿಡ ಬೆಳೆಸಿದರೆ ಸೋಂಕು, ಕ್ರಿಮಿ ಕೀಟಗಳು, ರೋಗ-ರುಜಿನಗಳು ಬರುವ ಸಾಧ್ಯತೆ ಕಡಿಮೆ . ಮಳೆಗಾಲ, ಚಳಿಗಾಲದಲ್ಲಿ ತುಳಸಿ ಎಲೆಯನ್ನು ಕಾಳುಮೆಣಸು ಜೊತೆ ಸೇರಿಸಿ ಕಷಾಯ ಮಾಡಿ ಕುಡಿದರೆ ಶೀತ ತಲೆನೋವು, ಜ್ವರ, ಕಫ ಒಂದೆರಡು ದಿನಗಳಲ್ಲಿ ಮಾಯವಾಗಿಬಿಡುತ್ತದೆ. ತುಳಸಿ ಎಲೆ ಅಲರ್ಜಿ ಶಮನಕಾರಿಯೂ ಹೌದು. ತುಳಸಿ ಎಲೆಯನ್ನು ಬಿಸಿ ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಚರ್ಮ ರೋಗ ಮೈಕೈ ನೋವು ನಿವಾರಣೆಯಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೊರೊನಾ ಸಂದರ್ಭದಲ್ಲಿ ನಾವೆಲ್ಲ ಇದನ್ನು ಉಪಯೋಗಿಸಿರುವುದು ನೆನಪಿನಲ್ಲಿದೆ.
ಸಾವಿನ ಮನೆಯಲ್ಲಿ ಇದನ್ನು ಹೆಚ್ಚು ಉಪಯೋಗಿಸುತ್ತಾರೆ. ಜೀವ ಹೋದ ನಂತರ ಕಳೆಬರಹ ದೇವರಿಗೆ ಸಮಾನ. ಮತ್ತೊಂದು ಕಡೆ ತುಳಸಿ ಹಾರವನ್ನು ಕೊರಳಿಗೆ ಹಾಕುವುದರ ಹಿಂದಿನ ಉದ್ದೇಶವೇನೆಂದರೆ ಇದು ಕಳೆ ಬರಹದ ಮೇಲಿರುವ ಕ್ರಿಮಿಕೀಟಗಳನ್ನು ನಾಶ ಮಾಡಿ ಅಂತ್ಯಸAಸ್ಕಾರಕ್ಕೆ ಆಗಮಿಸಿದ ಜನರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲೆಯನ್ನು ತುಟಿಗೆ ಲೇಪಿಸುವುದರಿಂದ ತುಟಿಯಲ್ಲಿರುವ ಕ್ರಿಮಿಗಳು ನಾಶ ಹೊಂದಿ ಸುತ್ತಲಿನ ಪರಿಸರ ಶುಭ್ರವಾಗಿರುತ್ತದೆ.
ತುಳಸಿ ಸಂಜೀವಿನಿಯಾಗಿದ್ದು ಗಿಡ ಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಮನೆಯ ಮುಂದೆ ತುಳಸಿ ಗಿಡವನ್ನು ನೆಡುವುದರಿಂದ ಒಳ್ಳೆಯ ಗಾಳಿ ಸೇವನೆ ಯೊಂದಿಗೆ ಕ್ರಿಮಿಕೀಟಗಳು ನಾಶವಾಗುತ್ತವೆ.
ಇದು ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಉಸಿರಾಟ, ಜೀರ್ಣಾಂಗ ಮತ್ತು ಚರ್ಮದ ಕಾಯಿಲೆ, ಯಕೃತ್ತು, ಅಸ್ತಮಾ, ಮೂತ್ರಪಿಂಡದ ಕಲ್ಲು, ಮಧುಮೇಹ ಮತ್ತು ಕೊಲೆಸ್ಟಾçಲ್ ಸ್ಥೂಲಕಾಯತೆ, ಕ್ಯಾನ್ಸರ್, ಅಧಿಕ ರಕ್ತದೊತ್ತಡ ವಿವಿಧ ಸೋಂಕುಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸುತ್ತಾರೆ. ಆದರೆ ತುಳಸಿ ಎಲೆಗಳನ್ನು ಮಹಿಳೆಯರು ಕಿ?ಳಬಾರದು ಪುರುಷರು ಮಾತ್ರ ಎಲೆಗಳನ್ನು ಕೀಳಬೇಕು ಎಂಬ ನಂಬಿಕೆಯು ಇದೆ. ತುಳಸಿ ಎಲೆಗಳನ್ನು ಕೀಳುವ ಮೊದಲು ಕೈಮುಗಿದು ಲಕ್ಷಿö್ಮಯನ್ನು ಪ್ರಾರ್ಥಿಸಿ ಅನುಮತಿಯನ್ನು ಪಡೆದು ನಂತರ ಕೀಳುವುದು ಸಂಪ್ರದಾಯ. ಅಮಾವಾಸ್ಯೆ, ಹುಣ್ಣಿಮೆ, ಸೂರ್ಯಗ್ರಹಣ, ಚಂದ್ರ ಗ್ರಹಣ, ಸೂರ್ಯ ಮುಳುಗಿದ ನಂತರ ತುಳಸಿ ಗಿಡವನ್ನು ಮುಟ್ಟುವುದಾಗಲಿ ಎಲೆಗಳನ್ನು ಕೀಳುವುದಾಗಲಿ ಮಾಡಬಾರದು. ಬೆಳಿಗ್ಗೆ ಖಾಲಿ ಹೊಟ್ಟೆಗೆ ತುಳಸಿ ತೀರ್ಥ, ಸಂಜೆ ತುಳಸಿ ಕಷಾಯ ಕುಡಿಯುವುದರಿಂದ ದೇಹದ ಸಮಶೀತೋಷ್ಣವನ್ನು ಕಾಯ್ದು ಕೊಳ್ಳಬಹುದು. ಕೀಟ ಕಡಿತಕ್ಕೆ ಇದರ ಎಲೆಯನ್ನು ಉಜ್ಜುವುದರ ಮೂಲಕ ಸೋಂಕು ನಿವಾರಿಸಬಹುದು. ನೆಲ್ಲಿಕಾಯಿ (ಧಾತ್ರಿ ಪೂಜೆ) ಕೊಂಬೆಯ ಪೂಜೆ ಮಾಡುವುದರಿಂದ ಹಾಗೂ ನೆಲ್ಲಿಕಾಯಿ ಸೇವನೆಯಿಂದ ದೇಹದಲ್ಲಿನ ನೂರಾರು ರೋಗಕ್ಕೆ ಪರಿಹಾರವಾಗುತ್ತದೆ.
ಕೊನೆಹನಿ -‘‘ಮನುಷ್ಯ ದೇಹದ ರಕ್ಷಕಿ ಸಮೃದ್ಧಿಯ ತುಳಸಿ. ಇರಲಿ ಮನೆಯ ಮುಂಭಾಗಿಲಿನಲಿ ಹರಸಿ’’
-ಎಸ್. ಎಂ.ರಜನಿ, ಸಹಾಯಕ ಪ್ರಾಧ್ಯಾಪಕರು, ಕಾವೇರಿ ಕಾಲೇಜು, ಗೋಣಿಕೊಪ್ಪಲು.