ಮಡಿಕೇರಿ, ನ. ೧೨: ಹಲ್ಲೆ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿ ತೀಪು ನೀಡಿದೆ.
ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಕಿಕ್ಕರಳ್ಳಿ ಗ್ರಾಮದಲ್ಲಿ ಎಸಿಎಫ್ ಕೆ.ಎ. ನೆಹರು ಅವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ರಾಜು ಹಾಗೂ ವೇಲಾಯುಧನ್ ಎಂಬವರುಗಳ ನಡುವೆ ಟಿವಿ ಚಾನೆಲ್ ಬದಲಾಯಿಸುವ ವಿಚಾರದಲ್ಲಿ ತಾ. ೧೧.೧೨.೨೦೨೩ರ ರಾತ್ರಿ ಜಗಳವಾಗಿತ್ತು. ಈ ಸಂದರ್ಭ ವೇಲಾಯುಧನ್ ಕತ್ತಿಯಿಂದ ರಾಜುವಿಗೆ ಕಡಿದಿದ್ದು, ಈ ವೇಳೆ ಬಿಡಿಸಲು ಬಂದ ರಾಜುವಿನ ಪತ್ನಿ ಚಿಮ್ಮಿ ಎಂಬವರ ಮೇಲು ವೇಲಾಯುಧನ್ ಕತ್ತಿ ಪ್ರಹಾರ ನಡೆಸಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸೋಮವಾರಪೇಟೆ ಡೈವೈಎಸ್ಪಿ ಆರ್.ವಿ. ಗಂಗಾಧರಪ್ಪ ಆರೋಫಿ ವೇಲಾಯುಧನ್‌ನನ್ನು ಬಂಧಿಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ಆರೋಪಿ ವಿರುದ್ಧ ಆರೋಪ ಸಾಬೀತಾದ್ದರಿಂದ ಆರೋಪಿ ವೇಲಾಯುಧನ್‌ಗೆ ರಾಜುವಿಗೆ ಕತ್ತಿಯಿಂದ ಕಡಿದ ಅಪರಾಧಕ್ಕೆ ೧೦ ವರ್ಷ ಶಿಕ್ಷೆ, ರಾಜುನ ಪತ್ನಿ ಚಿಮ್ಮಿಯವರ ಮೇಲೆ ಹಲ್ಲೆ ಮಾಡಿದ ಅಪರಾಧಕ್ಕೆ ೩ ವರ್ಷ ಶಿಕ್ಷೆ ಹಾಗೂ ೧೫೦೦೦ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ರಾಜು ಹಾಗೂ ಚಿಮ್ಮಿಗೆ ಸೂಕ್ತ ಪರಿಹಾರ ನೀಡಲು ಕ್ರಮಕೈಗೊಳ್ಳುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎನ್.ಪಿ. ದೇವೇಂದ್ರ ವಾದ ಮಂಡಿಸಿದರು.