ಗೋಣಿಕೊಪ್ಪ ವರದಿ, ನ. ೧೨: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ೪ ತಂಡಗಳು ಗೆದ್ದು ಮುಂದಿನ ಸುತ್ತಿಗೆ ಪ್ರವೇಶ ಪಡೆದವು.
ಬೊಟ್ಟಿಯತ್ನಾಡ್ ಕುಂದ ತಂಡಕ್ಕೆ ಅಮ್ಮತ್ತಿ ರಾಯಲ್ಸ್ ವಿರುದ್ಧ ೨-೦ ಗೋಲುಗಳ ಜಯ ಲಭಿಸಿತು. ಸೋಮಣ್ಣ ಎರಡು ಗೋಲು ಬಾರಿಸಿದರು. ಬೇಗೂರು ಈಶ್ವರ ಯೂತ್ ಕ್ಲಬ್ ತಂಡಕ್ಕೆ ಬೊಳಿಯೂರ್ ಸ್ಪೋರ್ಟ್ಸ್ ಕ್ಲಬ್ ರೆಡ್ ವಿರುದ್ಧ ೩-೨ ಗೋಲುಗಳ ಜಯ ದೊರೆಯಿತು. ಬೇಗೂರು ಪರವಾಗಿ ಶರಣ್, ಮಿಲನ್, ದೀಪಕ್, ಬೊಳಿಯೂರ್ ಪರ ಅಚ್ಚಯ್ಯ, ನಾಣಯ್ಯ ಒಂದೊAದು ಗೋಲು ಬಾರಿಸಿದರು.
ಮೂರ್ನಾಡು ಬ್ಲೇಜ್ ತಂಡವು ಅಂಜಿಗೇರಿನಾಡ್ ತಂಡವನ್ನು ೧-೦ ಗೋಲುಗಳಿಂದ ಮಣಿಸಿತು. ೪೫ನೇ ನಿಮಿಷದಲ್ಲಿ ಸುಗುಣ್ ಬಾರಿಸಿದ ಏಕೈಕ ಗೋಲು ಬ್ಲೇಜ್ ತಂಡಕ್ಕೆ ಗೆಲುವು ತಂದುಕೊಟ್ಟಿತು. ಎಂಆರ್ಎಫ್ ಮೂರ್ನಾಡು ತಂಡವು ನಾಪೋಕ್ಲು ಶಿವಾಜಿ ತಂಡವನ್ನು ೬-೪ ಗೋಲುಗಳಿಂದ ಪೆನಾಲ್ಟಿ ಶೂಟೌಟ್ನಲ್ಲಿ ಸೋಲಿಸಿತು. ಪೆನಾಲ್ಟಿ ಶೂಟೌಟ್ನಲ್ಲಿ ಮೂರ್ನಾಡು ೩ ಗೋಲು ಹೊಡೆದು ಪಂದ್ಯ ಗೆದ್ದುಕೊಂಡಿತು. ಮೂರ್ನಾಡು ತಂಡದ ಮಯೂರ್ ೩, ಕಾರ್ಯಪ್ಪ, ನಿರನ್, ದೇವಯ್ಯ, ಶಿವಾಜಿ ತಂಡದ ಶುಭಂ ಚಿಟ್ಯಪ್ಪ ೨, ಅವನೀಶ್ ೨ ಗೋಲು ದಾಖಲಿಸಿದರು.
ಟೂರ್ನಿ ನಿರ್ದೇಶಕರಾಗಿ ಅಮ್ಮಾಂಡೀರ ಚೇತನ್ ಮುತ್ತಣ್ಣ, ತೀರ್ಪುಗಾರರಾಗಿ ಕುಪ್ಪಂಡ ದಿಲನ್ ಬೋಪಣ್ಣ, ಚೋಯಮಾಡಂಡ ಚಂಗಪ್ಪ, ಕಳ್ಳಿಚಂಡ ಗೌತಂ, ವಿನೋದ್, ಕರವಂಡ ಅಪ್ಪಣ್ಣ, ಮೇರಿಯಂಡ ರಾಯಲ್ ಅಯ್ಯಣ್ಣ, ಅನ್ನಡಿಯಂಡ ಪೊನ್ನಣ್ಣ, ಪಟ್ರಪಂಡ ಸಚಿನ್ ಮಂದಣ್ಣ ಕಾರ್ಯನಿರ್ವಹಿಸಿದರು.