ಕುಶಾಲನಗರ, ನ. ೧೩: ಕರ್ನಾಟಕ ಮತ್ತು ಆಂಧ್ರಪ್ರದೇಶ ಅರಣ್ಯ ಇಲಾಖೆಗಳಿಗೆ ಸಂಬAಧಿಸಿದAತೆ ಪರಿಣಾಮಕಾರಿಯಾಗಿ ಅರಣ್ಯ ಹಾಗೂ ವನ್ಯಜೀವಿ ನಿರ್ವಹಣೆಗೆ ಎರಡು ರಾಜ್ಯಗಳ ಮಾವುತರು ಹಾಗೂ ಆನೆಕಾವಡಿಗರಿಗೆ ಸಾಮರ್ಥ್ಯ ವೃದ್ಧಿ ಹಾಗೂ ತರಬೇತಿ ನೀಡುವ ಹಿನ್ನೆಲೆಯಲ್ಲಿ ಕುಶಾಲನಗರ ಸಮೀಪ ದುಬಾರೆಯಲ್ಲಿ ಒಂದು ತಿಂಗಳ ಅವಧಿಯ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಎರಡು ರಾಜ್ಯಗಳ ಅರಣ್ಯ ಇಲಾಖೆಗಳ ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸುವ ಸಲುವಾಗಿ ರಾಜ್ಯಗಳ ಅರಣ್ಯ ಇಲಾಖೆಗಳ ನಡುವೆ ಒಪ್ಪಂದ ಮಾಡಲಾಗಿದ್ದು ಈ ಸಂಬAಧ ದುಬಾರೆ ಸಾಕಾನೆ ಶಿಬಿರದಲ್ಲಿ ಆಂಧ್ರಪ್ರದೇಶದ ೧೭ ಮಾವುತ ಕಾವಡಿಗರು ಮತ್ತು ೪ ಜನ ಇಲಾಖೆ ಸಿಬ್ಬಂದಿಗಳು ಸೇರಿದಂತೆ ೨೧ ಶಿಬಿರಾರ್ಥಿಗಳಿಗೆ ಹಮ್ಮಿಕೊಂಡಿರುವ ತರಬೇತು ಕಾರ್ಯಾಗಾರಕ್ಕೆ ಆಂಧ್ರ ಮತ್ತು ಕರ್ನಾಟಕದ ಹಿರಿಯ ಅರಣ್ಯ ಅಧಿಕಾರಿಗಳು ಚಾಲನೆ ನೀಡಿದರು.

ರಾಜ್ಯದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆನೆ ಯೋಜನೆಯ ಆರ್. ಮನೋಜ್, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ. ಸೀಮಾ, ಮಡಿಕೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು, ಆಂಧ್ರಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವನ್ಯಜೀವಿ ಪರಿಪಾಲಕ ಅಜಯ್ ಕುಮಾರ್ ನಾಯಕ್, ಅನಂತಪುರ ಅರಣ್ಯ ಸಂರಕ್ಷಣಾಧಿಕಾರಿ ಯಶೋಧ, ಅನ್ನಮಯ್ಯ, ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳಾದ ಜಗನ್ನಾಥ್ ಸಿಂಗ್, ಭರಣಿ ಮತ್ತಿತರ ಅಧಿಕಾರಿಗಳು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು. ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಆಂಧ್ರಪ್ರದೇಶದ ಅರಣ್ಯ ಸಚಿವ ಕೊನೆದಲ ಪವನ್ ಕಲ್ಯಾಣ್ ಅವರುಗಳು ಅರಣ್ಯ ಮತ್ತು ವನ್ಯಜೀವಿ ನಿರ್ವಹಣೆಗೆ ಸಂಬAಧಿಸಿದAತೆ ಎರಡು ರಾಜ್ಯದ ಅರಣ್ಯ ಇಲಾಖೆಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಲು ಒಪ್ಪಂದ ಮಾಡಿ ಕೊಂಡಿರುವುದಾಗಿ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ ಭಾಸ್ಕರ್ ಮಾಹಿತಿ ನೀಡಿದ್ದಾರೆ. ತರಬೇತಿಯ ಶಿಬಿರಾರ್ಥಿಗಳಿಗೆ ದುಬಾರೆ ಸಹಕಾರ ಶಿಬಿರದಲ್ಲಿ ೩೦ ದಿನಗಳ ಕಾಲ ನುರಿತ ಸಿಬ್ಬಂದಿ ಗಳಿಂದ ಹಾಗೂ ವಿಷಯ ತಜ್ಞರಿಂದ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.