ಚೆಯ್ಯಂಡಾಣೆ, ನ. ೧೩: ಎಸ್‌ಎಸ್‌ಎಫ್ ಸಂಘಟನೆಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಸಾಹಿತ್ಯೋತ್ಸವವು ಸಾಮಾಜಕ್ಕೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜ ಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.

ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ ಎಸ್ ಎಫ್) ಕೊಟ್ಟಮುಡಿಯ ಹೊದವಾಡ ಗ್ರಾಮದ ಅಝಾದ್ ನಗರದಲ್ಲಿ ೩ ದಿನಗಳ ಕಾಲ ಆಯೋಜಿಸಿದ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಇಂತಹ ಕಾರ್ಯ ಕ್ರಮಗಳು ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಒತ್ತು ನೀಡುತ್ತಿದೆ ಇಂತಹ ಕಾರ್ಯಕ್ರಮ ಹಮ್ಮಿ ಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಎಸ್‌ಎಸ್‌ಎಫ್ ಸಂಘಟನೆಯು ವರ್ಷಂಪ್ರತಿ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಶಾಖಾ ಮಟ್ಟದಿಂದ ಆರಂಭಗೊAಡು ಸೆಕ್ಟರ್, ಡಿವಿಷನ್, ಜಿಲ್ಲೆ, ರಾಜ್ಯ ಹಾಗೂ ರಾಷ್ಟಿçÃಯ ಮಟ್ಟದವರೆಗೆ ಆಯೋಜಿಸುತ್ತ ಬರುತ್ತಿದ್ದಾರೆ.

ಸುಮಾರು ೧೧೦ ರಷ್ಟು ಕಾರ್ಯಕ್ರಮಗಳಲ್ಲಿ ೫ ವಿಭಾಗಗಳಾಗಿ ೫ ವೇದಿಕೆಗಳಲ್ಲಿ ಮೂರು ಡಿವಿಷನ್ ತಂಡಗಳಾಗಿ ಸುಮಾರು ೫೦೦ ರಷ್ಟು ಪ್ರತಿಭೆಗಳು ಭಾಗವಹಿಸಿದ ಕಾರ್ಯಕ್ರಮದಲ್ಲಿ ಮಡಿಕೇರಿ ಡಿವಿಷನ್ ಚಾಂಪಿಯನ್ ಪಟ್ಟ ಅಲಂಕರಿಸಿ ವೀರಾಜಪೇಟೆ ಡಿವಿಷನ್ ರನ್ನರ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ತಾ. ೧೬ ಹಾಗೂ ೧೭ ರಂದು ಕೊಂಡAಗೇರಿಯಲ್ಲಿ ರಾಜ್ಯಮಟ್ಟದ ಸಾಹಿತ್ಯೋತ್ಸವ ನಡೆಯಲಿದೆ.

ಜಿಲ್ಲಾಧ್ಯಕ್ಷರಾದ ಝುಬೈರ್ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ ಪ್ರಾರ್ಥನೆ ನೆರವೇರಿಸಿದರು. ಕರ್ನಾಟಕ ಸಾಹಿತ್ಯ ಪ್ರಶಸ್ತಿ ವಿಜೇತರಾದ ಪ್ರೊಫೆಸರ್ ಕಾಳೇಗೌಡ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮತ್ತಿ ಸಾಹಿತ್ಯೋತ್ಸವ ಹಾಗೂ ಸಂಘಟನೆ ಈ ಸಮೂಹಕ್ಕೆ ನೀಡುವ ಸಂದೇಶ ಕುರಿತು ವಿವರಿಸಿದರು.

ಸಮಾರೋಪ ಸಮಾರಂಭ

ಸAಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಾತ್ಮಿಕ ನಾಯಕರಾದ ಸಯ್ಯಿದ್ ಮುತ್ತನೂರ್ ತಂಙಳ್ ಪ್ರಾರ್ಥನೆ ನೆರವೇರಿಸಿದರು. ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಎಸ್‌ಎಸ್‌ಎಫ್ ಸಂಘಟನೆ ನಡೆಸುವ ಕಾರ್ಯಕ್ರಮ ಗಳಿಂದ ವಿದ್ಯಾರ್ಥಿಗಳ ಒಳ್ಳೆಯ ಭವಿಷ್ಯಕ್ಕೆ ಕಾರಣವಾಗಲಿದೆ. ಹಾಗೂ ಎಲ್ಲಾ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸವನ್ನು ಕರಗತ ಮಾಡುವಂತೆ ತಿಳಿಸಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಈ ಸಂದರ್ಭ ಕೆಎಂಎ ಅಧ್ಯಕ್ಷರಾದ ಸೂಫಿ ಹಾಜಿ, ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ, ಹಿರಿಯ ಪತ್ರಕರ್ತರೂ ಚಿಂತಕರೂ ಆದ ಶಿವಸುಂದರ್, ಪ್ರಮುಖರಾದ ಹನೀಫ್ ಚೋಕಂಡಳ್ಳಿ, ಹಂಝ ಕೊಟ್ಟಮುಡಿ, ಹಾರಿಸ್ ಕೊಳಕೇರಿ, ಉಸ್ಮಾನ್ ಹಾಜಿ, ರಫೀಕ್ ಕೊಮ್ಮೆತ್ತೋಡು, ಮೈಸಿ ಕತ್ತಣೀರ, ಇಸ್ಮಾಯಿಲ್ ಸಖಾಫಿ, ಯಾಕೂಬ್ ಮಾಸ್ಟರ್, ಶಿಹಾಬುದ್ದೀನ್ ನೂರಾನಿ, ಅಬ್ದುಲ್ಲ ಸಖಾಫಿ, ಷಂಶುದ್ದೀನ್ ಅಂಜದಿ, ಜಲೀಲ್ ಅಮೀನಿ, ಮುಜೀಬ್ ಕೊಂಡAಗೇರಿ, ಎಸ್‌ವೈಎಸ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಹಫೀಲ್ ಸಅದಿ, ರಾಜ್ಯ ಕಾರ್ಯದರ್ಶಿ ಅನ್ವರ್ ಅಸ್'ಅದಿ, ನಿಝಾರ್ ಅಹ್ಸನಿ, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಕೋಶಾಧಿಕಾರಿ ಅಬ್ದುಲ್ಲಾ ನೆಲ್ಲಿಹುದಿಕೇರಿ ಇಸ್ಮಾಯಿಲ್ ಸಖಾಫಿ, ರಿಪ್ಪನ್ ಉಸ್ಮಾನ್ ಹಾಜಿ,ಡಾ-ಶುಶ್ರೂತ್ ಗೌಡ, ಆಶ್ರಫ್ ಆಝಾದ್ ನಗರ, ವಕ್ಫ್ ಸದಸ್ಯರಾದ ಮೊಯ್ದೀನ್ ಬಾಳುಗೋಡು, ಹರ್ಷಾದ್ ಸುಂಟಿಕೊಪ್ಪ, ಸಾಂಘಿಕ ನಾಯಕರು ಗಳು, ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ವರ್ಷ ಕಡಂಗದಲ್ಲಿ

೨೦೨೫ರ ಜಿಲ್ಲಾಮಟ್ಟದ ಸಾಹಿತ್ಯೋತ್ಸವವು ಕಡಂಗದಲ್ಲಿ ನಡೆಯಲಿದೆ ಎಂದು ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಘೋಷಣೆ ಮಾಡಿ ನಂತರ ಕಡಂಗ ಸಂಘ ಕುಟುಂಬದ ನಾಯಕರಿಗೆ ಎಸ್‌ಎಸ್‌ಎಫ್ ಧ್ವಜವನ್ನು ಹಸ್ತಾಂತರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಸ್ವಾಗತಿಸಿ, ಬಷೀರ್ ಆಝಾದ್ ಸರ್ವರನ್ನು ವಂದಿಸಿದರು.

-ಅಶ್ರಫ್