ಮಡಿಕೇರಿ, ನ. ೧೩: ಸಮಾಜ-ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿ ಕೊಡವ ಸಮಾಜದಲ್ಲಿ ನಗರದ ಸುಬ್ರಮಣ್ಯಕೇರಿ ಮುಂದಾಳತ್ವದಲ್ಲಿ ಶನಿವಾರ ನಡೆದ ಅಂತರ ಕೊಡವಕೇರಿ ಜನಪದ - ಸಾಂಸ್ಕೃತಿಕ ಮೇಳ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವ ಸಮಾಜದ ಅಭಿವೃದ್ಧಿಗೆ ಸರಕಾರದ ಅನುದಾನದೊಂದಿಗೆ ವೈಯಕ್ತಿಕವಾಗಿಯೂ ತಾವು ಸಹಕಾರ ನೀಡುವುದಾಗಿ ಅವರು ಈ ಸಂದರ್ಭ ಭರವಸೆಯಿತ್ತರು. ವರ್ಷಕ್ಕೊಂದು ಕಾರ್ಯಕ್ರಮದ ಬದಲು ಪ್ರತಿ ವಾರ, ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅದು ಜನಾಂಗದ ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ಅಭಿಮಾನ ಮೂಡಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಹಿರಿಯರು ತೋರುತ್ತಿರುವ ಆಸಕ್ತಿ ಅಭಿನಂದನಾರ್ಹ ಎಂದು ಮಂತರ್ ಗೌಡ ಅಭಿಪ್ರಾಯಪಟ್ಟರು.

ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ಪಾಲ್ಗೊಂಡಿದ್ದ ಶಾಸಕರು ಕೊಡವ ಸಂಗೀತ ರಸಮಂಜರಿ ಸಂದರ್ಭ ಜನರೊಂದಿಗೆ ಬೆರೆತು ಒಂದೆರಡು ಹೆಜ್ಜೆ ಹಾಕುವ ಮೂಲಕ ಸಂತಸದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಚೆಕ್ಕೆರ ಪಂಚಮ್ ಬೋಪಣ್ಣ ಅವರಿಂದ ಹಾಡುಗಾರಿಕೆ ಹಾಗೂ ಪೊಮ್ಮಕ್ಕಡ ಕೂಟ, ವಿವಿಧ ಕೇರಿ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ವಿನಾಯಕ ಕೇರಿ ಸಮಗ್ರ ಚಾಂಪಿಯನ್

ಅAತರ ಕೊಡವ ಕೇರಿ ಮೇಳದ ವಿವಿಧ ಜನಪದ ಸ್ಪರ್ಧೆಗಳಲ್ಲಿ ವಿನಾಯಕ ಕೊಡವ ಕೇರಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ವಿವಿಧ ಸ್ಪರ್ಧೆಗಳ ಪೈಕಿ ಬಹುತೇಕ ಬಹುಮಾನಗಳು ಈ ಕೇರಿಯ ಪಾಲಾಯಿತು. ಕೇರಿಯ ಸದಸ್ಯರಾದ ನಿವೃತ್ತ ಎಸ್.ಐ. ಚೊಟ್ಟೆಯಂಡ ಅಪ್ಪಾಜಿ ಅವರ ಪುತ್ರರಾದ ಶರತ್, ಸಂಜು ಹಾಗೂ ಮೊಮ್ಮಗ ಸಮಿತ್ ಸೋಮಣ್ಣ ಹಾಗೂ ಪುಣ್ಯ ಮಿಥಿಲ ಅವರುಗಳು ಕೆಲವು ಸ್ಪರ್ಧೆಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದು ಉತ್ಸುಕತೆ ಪ್ರದರ್ಶಿಸಿದರು.

ಕೇರಿಯ ಅಧ್ಯಕ್ಷ ಕುಡುವಂಡ ಉತ್ತಪ್ಪ ಹಾಗೂ ಪದಾಧಿಕಾರಿಗಳು ತಂಡದೊAದಿಗೆ ಬಹುಮಾನ ಪಡೆದುಕೊಂಡರು.

ಕೋಲಾಟ್‌ನಲ್ಲಿ ವಿನಾಯಕ ಕೊಡವ ಕೇರಿ (ಪ್ರಥಮ) ಸುದರ್ಶನ ಕೊಡವ ಕೇರಿ (ದ್ವಿತೀಯ) ದೇಚೂರು ಕೊಡವ ಕೇರಿ (ತೃತೀಯ), ಬೊಳಕಾಟ್‌ನಲ್ಲಿ ವಿನಾಯಕ ಕೇರಿ (ಪ್ರ), ದೇಚೂರು ಕೇರಿ (ದ್ವಿ), ಮುತ್ತಪ್ಪ ಕೇರಿ (ತೃ), ಉಮ್ಮತಾಟ್ ನಲ್ಲಿ ಎಫ್.ಎಂ.ಸಿ. ಕೇರಿ (ಪ್ರ), ಮುತ್ತಪ್ಪ ಕೇರಿ (ದ್ವಿ), ವಿನಾಯಕ, ದೇಚೂರು ಕೇರಿ (ತೃ), ಬಾಳೋಪಾಟ್ ವಿಭಾಗದಲ್ಲಿ ವಿನಾಯಕ ಕೇರಿ (ಪ್ರ), ದೇಚೂರು ಕೇರಿ (ದ್ವಿ), ಪರೆಯಕಳಿಯಲ್ಲಿ ದೇಚೂರು ಕೇರಿ (ಪ್ರ), ವಿನಾಯಕ ಕೇರಿ (ದ್ವಿ), ಸುದರ್ಶನ ಕೇರಿ (ತೃ), ಸಮ್ಮಂದ ಅಡ್‌ಕುವೊ ಮುತ್ತಪ್ಪ ಕೇರಿ (ಪ್ರ), ವಿನಾಯಕ ಕೇರಿ (ದ್ವಿ), ದೇಚೂರು ಕೇರಿ (ತೃ), ತಾಲಿಪಾಟ್‌ನಲ್ಲಿ ದೇಚೂರು ಕೇರಿ (ಪ್ರ), ವಿನಾಯಕ ಕೇರಿ (ದ್ವಿ), ಮುತ್ತಪ್ಪ ಕೇರಿ (ತೃ) ಬಹುಮಾನ ಪಡೆದುಕೊಂಡಿತು.

ಕಪ್ಪೆಯಾಟ್‌ನಲ್ಲಿ ತಾಪಂಡ ಆಶೀಸ್ (ಪ್ರ), ಚೊಟ್ಟ್ಟೆಯಂಡ ಶಮಿತ (ದ್ವಿ), ಇಟ್ಟೀರ ಶಮ ಕುಟ್ಟಪ್ಪ (ತೃ), ಕೊಡವ ಗಾಯನದ ೧೮ ವರ್ಷದೊಳಗಿನ ವಿಭಾಗದಲ್ಲಿ ಮಿನ್ನಂಡ ಚೆರಿ ಚೋಂದಮ್ಮ (ಪ್ರ), ಮಿನ್ನಂಡ ಚಿಣ್ಣಮ್ಮ (ದ್ವಿ), ೧೮ ರಿಂದ ೬೦ ವರ್ಷದೊಳಗಿನ ವಿಭಾಗದಲ್ಲಿ ಐಲಪಂಡ ಜಶ್ವಿತ ಸುಬ್ಬಯ್ಯ (ಪ್ರ), ನಾಯಕಂಡ ಲಾಂಛನ (ದ್ವಿ), ಮಂಡೀರ ಜಶಿಕಾ ಸೋಮಯ್ಯ (ತೃ), ೬೦ ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕಾಳೇಂಗಡ ಸಾವಿತ್ರಿ (ಪ್ರ), ಬೊಟ್ಟೋಳಂಡ ಶಾಂತಿ ಅಚ್ಚಯ್ಯ (ದ್ವಿ), ಬೇಬಿ ಪೂವಯ್ಯ (ತೃ), ವಾಲಗತಾಟ್ ೧೫ ವರ್ಷದೊಳಗಿನ ವಿಭಾಗದಲ್ಲಿ ತಾಪಂಡ ಹರ್ಷಿತ್ ಪೊನ್ನಪ್ಪ (ಪ್ರ), ಅಡ್ಡಂಡ ಪೃಥ್ವಿ ಪೊನ್ನಪ್ಪ (ದ್ವಿ), ಶಾಂತೆಯAಡ ಪೂವಣ್ಣ (ತೃ), ೧೫ ರಿಂದ ೩೦ ವರ್ಷದೊಳಗಿನ ವಿಭಾಗದಲ್ಲಿ ಕೂತಂಡ ರೋಹನ್ (ಪ್ರ), ಇಟ್ಟೀರ ಮಾನಸ್ ಮುತ್ತಪ್ಪ (ದ್ವಿ), ತಾಪಂಡ ಲಿಖಿತ್ (ತೃ), ೩೦ ರಿಂದ ೬೦ ವರ್ಷದೊಳಗಿನ ವಿಭಾಗದಲ್ಲಿ ಚೊಟ್ಟೆಯಂಡ ಅಪ್ಪಾಜಿ (ಪ್ರ), ಕನ್ನಂಡ ಬೊಳ್ಳಪ್ಪ ಸುಧಾ (ದ್ವಿ), ಚೆಟ್ಟಿಯಾರಂಡ ಸುರೇಶ್, ಕುಡುವಂಡ ಉತ್ತಪ್ಪ (ತೃ), ಬಹುಮಾನ ಗೆದ್ದರು. ಮಹಿಳೆಯ ವಾಲಗತಾಟ್ ಸ್ಪರ್ಧೆಯ ೧೫ ವರ್ಷದೊಳಗಿನ ವಿಭಾಗದಲ್ಲಿ ಮಿನ್ನಂಡ ಚೆರಿ ಚೋಂದಮ್ಮ (ಪ್ರ), ಬೊಳ್ಳೆರ ಡೀನಾ ಕಾವೇರಪ್ಪ (ದ್ವಿ), ಕೊಚ್ಚೆರ ಪಾರಿಕಾ (ತೃ), ೧೫ ರಿಂದ ೩೦ ವರ್ಷದೊಳಗಿನ ವಿಭಾಗಲದಲಿ ಬಲ್ಲಾರಂಡ ಡೀನಾ (ಪ್ರ), ನಾಟೋಳಂಡ ಕಾವ್ಯ (ದ್ವಿ), ಪೆಮ್ಮಚಂಡ ಪುಣ್ಯ, ಮುಕ್ಕಾಟಿರ ವಿದ್ಯಾ ಅಯ್ಯಪ್ಪ (ತೃ) ೩೦ ರಿಂದ ೬೦ ವರ್ಷದೊಳಗಿನ ವಿಭಾಗದಲ್ಲಿ ಬೊಳಂದAಡ ಲಲಿತಾ ನಂದಕುಮಾರ್ (ಪ್ರ), ಅಲ್ಲಾರಂಡ ತಾರ (ದ್ವಿ), ಗಾಂಡAಗಡ ಬೊಳ್ಳಮ್ಮ, ಆಪಾಡಂಡ ಸುಮಿತ್ರ (ತೃ) ಸ್ಥಾನ ಗಳಿಸಿಕೊಂಡರು.