ಕರಿಕೆ, ನ. ೧೩: ಗ್ರಾಮದಲ್ಲಿ ಹದಿನೈದು ದಿನಗಳಿಂದ ರಾತ್ರಿ ವೇಳೆ ಉಪಟಳ ನೀಡುತ್ತಿರುವ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಯಿಂದ ಕಳೆದ ರಾತ್ರಿ ಎರಡು ಸಿಸಿ ಕ್ಯಾಮರಾ ಅಳವಡಿಸ ಲಾಗಿದ್ದು, ಕ್ಯಾಮರಾದಲ್ಲಿ ಚಿರತೆ ಸೆರೆಯಾಗಿರುವುದಿಲ್ಲ. ಇದೀಗ ಮತ್ತೆ ನಾಲ್ಕು ಕ್ಯಾಮರಾ ತರಿಸಿ ಅಳವಡಿಸಲು ಕ್ರಮವಹಿಸಿ ರುವುದಾಗಿ ಭಾಗಮಂಡಲ ವಲಯ ಅರಣ್ಯ ಅಧಿಕಾರಿ ರವೀಂದ್ರ `ಶಕ್ತಿ'ಗೆ ಮಾಹಿತಿ ನೀಡಿದ್ದಾರೆ. ಶೀಘ್ರವಾಗಿ ಚಿರತೆಯನ್ನು ಬೋನ್ ಇರಿಸಿ ಸೆರೆಹಿಡಿಯಬೇಕೆಂದು ಪಚ್ಚೆಪಿಲಾವು ಗ್ರಾಮಸ್ಥರು ಸಭೆ ನಡೆಸಿ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.