ಶ್ರೀಮಂಗಲ, ನ. ೧೩: ಕೊಡವ ಜನಾಂಗದ ಏಳಿಗೆ ಮತ್ತು ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಇನ್ನಷ್ಟು ತೊಡಗಿಸಿಕೊಳ್ಳಲು ಜನಾಂಗದ ಮಹಿಳೆಯರನ್ನು ಸಂಘಟಿಸುವ ನಿಟ್ಟಿನಲ್ಲಿ ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ವತಿಯಿಂದ ನೂತನವಾಗಿ ಪೊಮ್ಮಕ್ಕಡ ಕೂಟವನ್ನು ಸ್ಥಾಪನೆ ಮಾಡಲಾಗಿದೆ.

ನೂತನ ಸಂಸ್ಥೆಯ ಅಧ್ಯಕ್ಷೆಯಾಗಿ ಕೋಟ್ರಮಾಡ ರೇಷ್ಮಾ ಕಾರ್ಯಪ್ಪ, ಉಪಾಧ್ಯಕ್ಷೆಯಾಗಿ ಮನ್ನೆರ ಸರು ರಮೇಶ್, ಕಾರ್ಯದರ್ಶಿಯಾಗಿ ಕಳ್ಳಿಚಂಡ ದೀನಾ ಉತ್ತಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೊಮ್ಮಕ್ಕಡ ಕೂಟಕ್ಕೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಾಂಸ್ಕೃತಿಕ ಸಮಿತಿ ಸಂಚಾಲಕಿಯಾಗಿ ಕೋಟ್ರಮಾಡ ಶೈಮ ತಮ್ಮಯ್ಯ, ಮನ್ನೆರ ದೇವಿಕಾ ದೇವಯ್ಯ, ಕ್ರೀಡಾ ಸಂಚಾಲಕಿಯಾಗಿ ತಡಿಯಂಗಡ ಗಾನ ಸೋಮಣ್ಣ, ನಿರ್ದೇಶಕರುಗಳಾಗಿ ಅಪ್ಪಚಂಗಡ ಲಲಿತ ಮೋಟಯ್ಯ, ಕೋಟ್ರಮಾಡ ರಾಣಿ ದೇವಯ್ಯ, ಮಚ್ಚಮಾಡ ರೋಜಿ ಸುಮಂತ್, ಕಳ್ಳಿಚಂಡ ದೇವಿಕಾ ನಂಜಪ್ಪ, ಚೆಟ್ಟಂಗಡ ಪಿಂಕಿ ವಸಂತ್, ಚೊಟ್ಟೆಯಂಡಮಾಡ ಜಯಶ್ರೀ ಅಪ್ಪಣ್ಣ, ಮನ್ನೆರ ಕಾವೇರಮ್ಮ ಅಜಿತ್, ಬೊಳ್ಳಜಿರ ಸುಶೀಲ ಅಶೋಕ್, ಅಜ್ಜಮಾಡ ಪ್ರಮೀಳಾ ಕರುಂಬಯ್ಯ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಸಮಾಜದ ಅಧ್ಯಕ್ಷ ಹರೀಶ್ ಅಪ್ಪಯ್ಯ ಮಹಿಳೆಯರು ಸಂಘಟಿತರಾಗಿ ಜನಾಂಗದ ಬೆಳವಣಿಗೆ ಹಾಗೂ ಸಂರಕ್ಷಣೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದರು.

ಸಮಾಜದ ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಜವಾಬ್ದಾರಿ ಹೆಚ್ಚಿದೆ ಎಂದರು.

ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ನಿರ್ದೇಶಕರುಗಳಾದ ಚಂಗುಲAಡ ಅಶ್ವಿನಿ ಸತೀಶ್, ತೀತಿರ ಅನಿತಾ ಸುಬ್ಬಯ್ಯ, ತಡಿಯಂಗಡ ಸೌಮ್ಯ ಕರುಂಬಯ್ಯ ಕರ್ನಂಡ ರೂಪ ದೇವಯ್ಯ ಸೇರಿದಂತೆ ಪೊಮ್ಮಕ್ಕಡ ಕೂಟದ ೩೦ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದರು.