ಕುಶಾಲನಗರ, ನ. ೧೩: ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ಪತಿ ಪತ್ನಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.

ಕೊಪ್ಪ ಗ್ರಾಮದ ನಿವಾಸಿ ಸುರೇಶ (೩೩) ಮತ್ತು ಆತನ ಪತ್ನಿ ಪಲ್ಲವಿ (೨೯) ಆತ್ಮಹತ್ಯೆಗೆ ಮಾಡಿಕೊಂಡ ದುರ್ದೈವಿಗಳು. ಸುರೇಶ ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಕೊಪ್ಪ ಸಮೀಪದ ಹೊನ್ನೂರು ಗ್ರಾಮದ ಬಳಿ ಆತನಿಗೆ ಸೇರಿದ ಹಳೆಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೈಲುಕುಪ್ಪೆ ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತ ದಂಪತಿಗಳು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.

ಪೊಲೀಸರು ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.