ಮಡಿಕೇರಿ, ನ. ೧೩ : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ತಾ. ೧೫ ರಂದು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಲಿದ್ದಾರೆ.
ಬೆಳಿಗ್ಗೆ ೯.೩೦ ಗಂಟೆಗೆ ಕುಶಾಲನಗರದ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ ನಂತರ ೧೦.೩೦ಕ್ಕೆ ಮಕ್ಕಂದೂರು ಗ್ರಾಮದಲ್ಲಿ ಮಡಿಕೇರಿ ಗ್ರಾಮಾಂತರ ಸಂಘಟನಾ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ೧೧.೩೦ ಗಂಟೆಗೆ ಕೆ. ನಿಡುಗಣೆ, ೧೨.೩೦ಕ್ಕೆ ಗಾಳಿಬೀಡು, ಮಧ್ಯಾಹ್ನ ೨.೩೦ ಗಂಟೆಗೆ ಹಾಕತ್ತೂರು, ಮೇಕೇರಿ, ಸಂಜೆ ೪ ಗಂಟೆಗೆ ಮರಗೋಡು, ಹೊಸ್ಕೇರಿ, ೫ಕ್ಕೆ ಕಡಗದಾಳು, ೬ ಗಂಟೆಗೆ ಮಡಿಕೇರಿ ನಗರಕ್ಕೆ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರರಾದ ಬಿ.ಕೆ. ಅರುಣ್ ಕುಮಾರ್ ಹಾಗೂ ತಳೂರು ಕಿಶೋರ್ ತಿಳಿಸಿದ್ದಾರೆ.