ಮಡಿಕೇರಿ, ನ. ೧೪ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೊಡಗು ಜಿಲ್ಲಾ ಶಾಖೆ ೨೦೨೪-೨೯ನೇ ಅವಧಿಯ ನಿರ್ದೇಶಕರ ಸ್ಥಾನಕ್ಕೆ ತಾ. ೧೬ ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದೆ.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮತ ಕ್ಷೇತ್ರ ಸಂಖ್ಯೆ ೨೯ ಸರ್ಕಾರಿ ಪ್ರಾಥಮಿಕ ಶಾಲೆ ಇದರ ನಾಲ್ಕು ಸ್ಥಾನಗಳಿಗೆ ಮತ್ತು ಮತಕ್ಷೇತ್ರ ಸಂಖ್ಯೆ ೪೮ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಗಳು ಇದರ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಮತಕ್ಷೇತ್ರ ಸಂಖ್ಯೆಯ ಅರ್ಹ ಮತದಾರರು ಚುನಾವಣೆಯಲ್ಲಿ ಭಾಗವಹಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಚುನಾವಣಾಧಿಕಾರಿ ಕೋರಿದ್ದಾರೆ.
ಚುನಾವಣೆಗೆ ಆಗಮಿಸುವ ಮತದಾರರು ಕಡ್ಡಾಯವಾಗಿ ಇಲಾಖಾ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ನೊಂದಿಗೆ ಆಗಮಿಸುವಂತೆ ಕೋರಿದ್ದಾರೆ.