*ಮಡಿಕೇರಿ, ನ. ೧೪: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಸಂಪ್ರದಾಯದAತೆ ಪಾಡಿ ದೇವಸ್ಥಾನದ ಪತ್ತೇಪರೆಯಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ದೇವತಕ್ಕರ, ಊರುನಾಡಿನ ಭಕ್ತಾದಿಗಳ, ಪಾಡಿ ನಾಲ್ಕು ನಾಡಿನ ತಕ್ಕಮುಖ್ಯಸ್ಥರ, ಹಿರಿಯರ ಸಮ್ಮುಖದಲ್ಲಿ ಅಮ್ಮಂಗೇರಿ ಕಣಿಯರು ಪುತ್ತರಿ ಹಬ್ಬದ ದಿನ ಬಿರ್ಚ್ಯಾರ್ ಕಲಾಡ್ಚ ಹಬ್ಬದ ದಿನ ಹಾಗೂ ಪುತ್ತರಿ ಹಬ್ಬದ ಕದಿರು ತೆಗೆಯುವ ಶುಭ ಘಳಿಗೆಯ ಪುತ್ತರಿ ಮುಹೂರ್ತ ಪಟ್ಟಿಯನ್ನು ನಿಗದಿಗೊಳಿಸಲಿದ್ದಾರೆ.

ಅದೇ ದಿನ ಅಪರಾಹ್ನ ಸಂಪ್ರದಾಯದAತೆ ಆದಿಸ್ಥಾನ ಮಲ್ಮದಲ್ಲಿ ವಿಶಾಖ ನಕ್ಷತ್ರದಲ್ಲಿ ದೇಶಕಟ್ಟು ಜಾರಿಯಾಗುತ್ತದೆ. ಈ ಕ್ಷಣದಿಂದ ೧೫ ದಿನಗಳ ಕಾಲ ಅಂದರೆ ಬಿರ್ಚ್ಯಾರ್ ಕಲಾಡ್ಚ ಹಬ್ಬದಂದು ಮಲ್ಮದಲ್ಲಿ ಕಟ್ಟು ಸಡಿಲಿಸುವವರೆಗೆ ಪ್ರಾಚೀನ ನಿಯಮದಂತೆ ಆಡಂಬರದ ಕಾರ್ಯಕ್ರಮಗಳಾದ ಮದುವೆಯಂತಹ ಸಮಾರಂಭಗಳು, ಪ್ರಾಣಿ ಹಿಂಸೆ ಮಾಡುವುದು ನಿಷಿದ್ಧ ಹಾಗೂ ಸಂಪ್ರದಾಯಬದ್ಧವಲ್ಲವೆAದು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ದೇವತಕ್ಕರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.