ವೀರಾಜಪೇಟೆ, ನ. ೧೪: ಪ್ರತಿಯೊಂದು ಪಕ್ಷಿಗಳಿಗೂ ತನ್ನದೆ ಆದ ವಿಶಿಷ್ಟತೆಗಳಿವೆ ಎಂದು ಪಕ್ಷಿ ವೀಕ್ಷಕ ರಾದ ಶ್ರೀಕಾಂತ್ ರಾವ್ ಹೇಳಿದರು.
ಸಮೀಪದ ಅರಮೇರಿ ಕಳಂಚೇರಿ ಶ್ರೀ ಮಠದ ಲಿಂಗ ರಾಜೇಂದ್ರ ಭವನದಲ್ಲಿ ನಡೆದ ‘ಹೊಂಬೆಳಕು ಕಿರಣ ೨೨೫ ಮಾಸಿಕ ತತ್ತ÷್ವಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ‘ಬಾನಾಡಿಗಳ ವಿಸ್ಮಯ ಜಗತ್ತು' ಎಂಬ ವಿಷಯದ ಬಗ್ಗೆ ಮಾತನಾಡಿ, ಜಗತ್ತಿನಲ್ಲಿರುವ ಬಾನಾಡಿಗಳ ಬಗ್ಗೆ ಮಾಹಿತಿ ನೀಡಿದರು.
ಮೈಸೂರಿನ ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಕನ್ನಡ ಪ್ರಾದ್ಯಾಪಕರಾದ ಸಣ್ಣುವಂಡ ಬಿ.ತೇಜ ಅವರು ಕಾರ್ಯಕ್ರಮದ ಮೊದಲಿಗೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಪಕ್ಷಿಗಳ ಕಲರವ ಕೇಳುವ ಅಸಕ್ತಿ ಇರಬೇಕು. ಈ ರೀತಿ ಕಾರ್ಯಕ್ರಮಗಳು ಜನರ ಮನಸನ್ನು ತಲುಪುವುದು ಸೂಕ್ತವಾಗಿರುತ್ತದೆ. ಗಿಡ ಮರಗಳನ್ನು ಬೆಳೆಸುವ ಮೂಲಕ ಪ್ರಕೃತಿ ಪರಿಸರವನ್ನು ಉಳಿಸಿ ಬೆಳೆಸುವಂತಾಗಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಶ್ರೀ ಮಠದ ಅಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಮ್ಮ ಹಿತವಚನದಲ್ಲಿ ಜೀವರಾಶಿ ಪಕ್ಷಿಗಳಿಗೆ ಪ್ರತಿಯೊಬ್ಬರು ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತಾಗಬೇಕು. ಪ್ರಕೃತಿಯಿಂದ ಸೌಲತ್ತುಗಳನ್ನು ಪಡೆದುಕೊಳ್ಳುವ ನಾವು ಕಾಡುಗಳು ನಾಶವಾಗದಂತೆ ಎಚ್ಚರ ವಹಿಸುವ ಮೂಲಕ ಗಿಡಗಳನ್ನು ನೆಟ್ಟು ಪೋಶಿಸಿ ಮರಗಳನ್ನು ಬೆಳೆಸುವಂತಾಗಬೇಕು.
ಮರದ ಹಣ್ಣುಗಳನ್ನು ಪಕ್ಷಿಗಳು ತಿಂದು ಇತರೆಡೆಗಳಲ್ಲಿ ಬೀಜ ಹರಡಿ ಗಿಡಗಳು ಬೆಳೆಯಲಿವೆ ಎಂದರು. ವಿದ್ಯಾರ್ಥಿ ವರ್ಧಿನಿ ಸ್ವಾಗತಿಸಿದರು, ಕೆ.ಬಿ. ಇಂಪನ ನಿರೂಪಿಸಿದರೆ, ಸುಶ್ಮಿತಾ ವಂದಿಸಿದರು.