ಮುಳ್ಳೂರು, ನ. ೧೪: ಸಮೀಪದ ಶನಿವಾರಸಂತೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಾವು ಪ್ರತಿಷ್ಠಾನ ಟ್ರಸ್ಟ್ ಮತ್ತು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕು ಪೂರ್ವ ತಯಾರಿ ಕಾರ್ಯಾಗಾರವನ್ನು ಹಮ್ಮಿಕೊಳ್ಳ ಲಾಯಿತು.
ಕಾರ್ಯಾಗಾರದಲ್ಲಿ ಪ್ರತಿಷ್ಠಾನದ ಸ್ವಯಂ ಸೇವಕಿ ಬಿ.ಕೆ. ಕುಮಾರಿ ಮಾಹಿತಿ ನೀಡಿ ಮಕ್ಕಳು ರಾಷ್ಟçದ ಭವಿಷ್ಯತ್ತಿನ ಪ್ರಜೆಗಳಾಗಿರುವುದರಿಂದ ಮಕ್ಕಳ ಹಕ್ಕು, ಬಾಲ್ಯ ವಿವಾಹ, ಮಕ್ಕಳ ಶಿಕ್ಷಣದ ಹಕ್ಕು, ಬಾಲ ಕಾರ್ಮಿಕ ಪದ್ದತಿ, ಶಾಲೆ ಬಿಟ್ಟ ಮಕ್ಕಳು ಮತ್ತೆ ಶಾಲೆಗೆ ಸೇರುವುದು ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇರುವ ನಿಟ್ಟಿನಲ್ಲಿ ನಾವು ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಕಾನೂನು ಕಾಯಿದೆಗಳ ಕುರಿತು ಮತ್ತು ಮಕ್ಕಳ ಹಕ್ಕು ಪೂರ್ವ ತಯಾರಿಗೋಸ್ಕರವಾಗಿ ಅರಿವು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಶಾಲಾ ಮುಖ್ಯ ಶಿಕ್ಷಕ ಟಿ. ವಿಶ್ವನಾಥ್ ಮಾಹಿತಿ ನೀಡಿದರು. ಈ ಸಂದರ್ಭ ಶಾಲಾ ಶಿಕ್ಷಕಿಯರಾದ ಶಶಿಕಲಾ, ಪುಷ್ಪಾವತಿ, ಲಕ್ಷಿö್ಮ ಅತಿಥಿ ಶಿಕ್ಷಕಿಯರಾದ ರೂಪ, ಸಂಧ್ಯಾ ಹಾಜರಿದ್ದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಮನಸ್ಥಿತಿ ಅರಿಯುವುದು, ವ್ಯಕ್ತಿತ್ವ ವಿಕಸನಗೊಳಿಸುವುದು, ಆತ್ಮವಿಶ್ವಾಸ ಹೆಚ್ಚು ಮಾಡುವ ಉದ್ದೇಶದಿಂದ ಮಕ್ಕಳಿಂದ ಚಿತ್ರ ಬಿಡಿಸುವ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಯಿತು.