ಗೋಣಿಕೊಪ್ಪ ವರದಿ, ನ. ೧೪ : ಬೆಂಗಳೂರು ಶಾಂತಿನಗರದಲ್ಲಿರುವ ಫೀ. ಮಾ. ಕೆ.ಎಂ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ಆರಂಭಗೊAಡಿರುವ ೧೪ ವಯೋಮಿತಿಯ ಬಾಲಕರ ಮಿನಿ ಒಲಂಪಿಕ್ಸ್ ಹಾಕಿಯಲ್ಲಿ ಹಾಕಿ ಕೂರ್ಗ್ ತಂಡ ಮೊದಲ ಜಯ ದಾಖಲಿಸಿದೆ.

ಕಲಬುರ್ಗಿ ವಿರುದ್ಧ ೯-೦ ಗೋಲುಗಳಿಂದ ಗೆದ್ದು ಬೀಗಿತು. ಪ್ರಥಮ್ ಪೂವಯ್ಯ, ಪೀತಂ ತಲಾ ೨ ಗೋಲು ಹೊಡೆದರು. ಜೋಯಪ್ಪ, ಎನ್. ಪಿ. ಬೋಪಣ್ಣ, ರಿಶಿ ಕಾವೇರಪ್ಪ, ಪ್ರಜ್ವಲ್ ಪೊನ್ನಪ್ಪ, ದೈವಿಕ್ ಪೊನ್ನಣ್ಣ ಒಂದೊAದು ಗೋಲು ಹೊಡೆದು ಗೆಲುವು ತಂದುಕೊಟ್ಟರು. ತರಬೇತುದಾರರಾಗಿ ತೀತಮಾಡ ವಿನು, ವ್ಯವಸ್ಥಾಪಕ ವಿನೋದ್ ತಂಡದಲ್ಲಿದ್ದಾರೆ.