ಸೋಮವಾರಪೇಟೆ, ನ. ೧೪: ಕಳೆದ ತಾ. ೯ ರಂದು ಮಡಿಕೇರಿ ತಾಲೂಕಿನ ಹಚ್ಚಿನಾಡು ಗ್ರಾಮದಲ್ಲಿ ನಡೆದಿದ್ದ ಗುಂಡೇಟು ಪ್ರಕರಣದ ಪ್ರಮುಖ ಆರೋಪಿ ಚಾಂಡಾನನ್ನು ಬಂದಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಚ್ಚಿನಾಡು ಗ್ರಾಮದ ಅಣ್ಣಯ್ಯ (ಮಧು) ಎಂಬವರ ಮೇಲೆ ಅದೇ ಗ್ರಾಮದ ಕಾರ್ಮಿಕ ಚಾಂಡಾ ಕಳೆದ ತಾ. ೯ ರ ರಾತ್ರಿ ೧೦.೩೦ರ ವೇಳೆಗೆ ಕೋವಿಯಿಂದ ಗುಂಡು ಹಾರಿಸಿದ್ದ. ಘಟನೆಯಿಂದ ಮಧು ಅವರ ಹೊಟ್ಟೆ, ಕೈ ಭಾಗಕ್ಕೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಗುಂಡು ಹಾರಿಸಿದ ನಂತರ ಚಾಂಡಾ ಹಾಗೂ ಇತರರು ಕೋವಿ ಸಹಿತ ಪರಾರಿಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ತನಿಖೆಯ ಬೆನ್ಬಟ್ಟಿದ ಪೊಲೀಸರು ಪ್ರಮುಖ ಆರೋಪಿ ಚಾಂಡಾನ ಬಂಧನಕ್ಕೆ ಬಲೆ ಬೀಸಿದ್ದರು. ಘಟನೆ ನಡೆದ ನಾಲ್ಕು ದಿನದ ತರುವಾಯ ಪೊಲೀಸರು ಆರೋಪಿ ಚಾಂಡಾನನ್ನು ವಶಕ್ಕೆ ಪಡೆಯಲಾಗಿದೆ.

ಇಂದು ಸಂಜೆ ಹಚ್ಚಿನಾಡು ಸಮೀಪದ ಕುಂಡಚ್ಚಿ ಕಾಡಿನಲ್ಲಿ ಚಾಂಡಾನನ್ನು ಪತ್ತೆಹಚ್ಚಿ ವಶಕ್ಕೆ ಪಡೆದ ಪೊಲೀಸರು, ಆತನನ್ನು ಸೋಮವಾರಪೇಟೆ

(ಮೊದಲ ಪುಟದಿಂದ) ಪೊಲೀಸ್ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಮುದ್ದು ಮಹದೇವ, ಸಬ್ ಇನ್ಸ್ ಪೆಕ್ಟರ್ ಗೋಪಾಲ್, ಸಿಬ್ಬಂದಿಗಳಾದ ಲೋಕೇಶ್, ಶರತ್, ತೀರ್ಥ ಕುಮಾರ್, ರವಿಕಾಂತ್, ಮಲ್ಲೇಶ್, ರಹಮಾನ್ ಅವರುಗಳು ಭಾಗಿಯಾಗಿದ್ದರು.