*ಗೋಣಿಕೊಪ್ಪ, ನ. ೧೪: ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರನ್ನು ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಇಗ್ಗುತ್ತಪ್ಪ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸದಸ್ಯರು ಸನ್ಮಾನಿಸಿ, ಶುಭ ಕೋರಿದರು. ಸಾರ್ವಜನಿಕವಾಗಿ ಇವರ ಸೇವೆ, ಪೊನ್ನಂಪೇಟೆ ತಾಲೂಕು ಘೋಷಣೆಗಾಗಿ ಹೋರಾಟಕ್ಕೆ ಮುನ್ನುಡಿ ಬರೆದಿದ್ದ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಇಳಿ ವಯಸ್ಸಿನಲ್ಲಿ ನಿತ್ಯ ಚಟುವಟಿಕೆಯಿಂದ ತೊಡಗಿಕೊಳ್ಳುವ ಪರಿ, ಸಾರ್ವಜನಿಕ ಸೇವೆ, ಶಿಕ್ಷಣಕ್ಕೆ ನೀಡುತ್ತಿರುವ ಸೇವೆ, ಬಾಕ್ಸಿಂಗ್ ಅಸೋಸಿಯೇಷನ್ ಮೂಲಕ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಪ್ರಶಸ್ತಿ ಪುರಸ್ಕೃತ ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಸಂಸ್ಥಾಪಕ ಜೀವಾವದಿ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಹಿಂದೆ ಹಾಕಿ ಆಟದ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾದ ಕಾರಣ, ಇಳಿ ವಯಸ್ಸಿನಲ್ಲೂ, ಚೈತನ್ಯದಿಂದ ಇರಲು ಸಾಧ್ಯವಾಗಿದೆ. ಎಜಿಎಸ್ ಸೀನಿಯರ್ ಅಕೌಂಟ್ ಅಧಿಕಾರಿಯಾಗಿ ಸರ್ಕಾರಿ ಸೇವೆ ಸಂದರ್ಭ ಬಡಾವಣೆ ನಿರ್ಮಿಸುವ ಮೂಲಕ ಸಿಬ್ಬಂದಿಗೆ ವಸತಿ ಸೌಕರ್ಯ ಕಲ್ಪಿಸಿಕೊಡುವಲ್ಲಿ ಅನುಷ್ಠಾನ ಮಾಡಿದ ಯೋಜನೆ ಹೆಚ್ಚು ಪ್ರಯೋಜನ ಕಂಡಿದೆ. ಬೇರೆಯವರಿಗೆ ಸಹಾಯವಾಗುವಂತಹ ಕಾರ್ಯ ಮುಖ್ಯ ಎಂದರು. ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತೀರ ಸೋಮಣ್ಣ, ಉಪಾಧ್ಯಕ್ಷ ಮಂಡೆಚAಡ ಗಣೇಶ್ ಗಣಪತಿ, ಪ್ರಧಾನ ಕಾರ್ಯದರ್ಶಿ ಚೇಂದೀರ ಬೋಪಣ್ಣ, ಖಜಾಂಚಿ ಐನಂಡ ಮಂದಣ್ಣ, ಲೆಕ್ಕ ಪರಿಶೋಧಕ ದಾದು ಪೂವಯ್ಯ, ಹಿರಿಯರಾದ ಪಾರುವಂಗಡ ಮೊಣ್ಣಪ್ಪ, ಮುಲ್ಲೇಂಗಡ ಶಂಕರಿ ಪೊನ್ನಪ್ಪ ಇದ್ದರು. ಸುಬ್ರಮಣಿ ಪರಿಚಯ ಮಾಡಿದರು.