ನಾಪೋಕ್ಲು, ನ. ೧೪: ಅಂಗಾAಗಗಳನ್ನು ದಾನ ಮಾಡುವುದರಿಂದ ಒಬ್ಬ ವ್ಯಕ್ತಿಯ ಜೀವ ಉಳಿಸಬಹುದು ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಶಶಾಂಕ್ ಹೇಳಿದರು. ಇಲ್ಲಿನ ಮಹಿಳಾ ಸಮಾಜದಲ್ಲಿ ನಾಪೋಕ್ಲು ಲಯನ್ಸ್ ಕ್ಲಬ್ ಮತ್ತು ಲಿಯೊ ಕ್ಲಬ್, ನಾಪೋಕ್ಲು ಮಹಿಳಾ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ದೇಹ ಮತ್ತು ಅಂಗಾAಗ ದಾನದ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಆರೋಗ್ಯವಂತ ವ್ಯಕ್ತಿಯ ಅಂಗಾAಗಗಳನ್ನು ದಾನ ಮಾಡಬಹುದು. ಹೃದಯ ಸೇರಿದಂತೆ ದೇಹದ ವಿವಿಧ ಅಂಗಾAಗಳನ್ನು ದಾನ ಮಾಡಲು ಸಾಧ್ಯವಿದೆ. ಅಂಗಾAಗ ದಾನ ಮಾಡುವ ಮಂದಿ ವೈದ್ಯರ ಸಹಕಾರದಿಂದ ವ್ಯಕ್ತಿಗಳ ಜೀವ ಉಳಿಸಲು ಸಾಧ್ಯ ಎಂದು ಮಾಹಿತಿಯಿತ್ತರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮೇರಿ ಚಿಟ್ಟಿಯಪ್ಪ ವಹಿಸಿದ್ದರು. ನಾಪೋಕ್ಲು ಮಹಿಳಾ ಸಮಾಜದ ಅಧ್ಯಕ್ಷೆ ರೇಷ್ಮಾ ಉತ್ತಪ್ಪ, ಭಗವತಿ ಮಹಿಳಾ ಸಮಾಜದ ಅಧ್ಯಕ್ಷೆ ಬೊಳ್ಳಮ್ಮ ನಾಣಯ್ಯ, ಗಾಯತ್ರಿ ಸಂಘದ ಅಧ್ಯಕ್ಷೆ ಧರಣಿ ಗಣಪತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾ ಅರುಣ್, ಲಯನ್ಸ್ ಕ್ಲಬ್ ಖಜಾಂಜಿ ರೇಖಾ ಪೊನ್ನಣ್ಣ ಉಪಸ್ಥಿತರಿದ್ದರು.