ಮಡಿಕೇರಿ, ನ. ೧೪: ಭಾರತ ಸೀನಿಯರ್ ಹಾಕಿ ತಂಡಕ್ಕೆ ಜಿಲ್ಲೆಯ ಚಂದುರ ಬಿ. ಪೂವಣ್ಣ ಅವರು ಆಯ್ಕೆಯಾಗಿದ್ದಾರೆ. ಕಳೆದ ಏಳೆಂಟು ವರ್ಷಗಳ ಅಂತರದ ಬಳಿಕ ಇದೀಗ ಕೊಡಗಿನ ಹಾಕಿ ಆಟಗಾರರೊಬ್ಬರು ಭಾರತ ಸೀನಿಯರ್ ತಂಡದಲ್ಲಿ ಆಡುವ ಅವಕಾಶ

ಭಾರತ ಹಾಕಿ ತಂಡಕ್ಕೆ ಚಂದುರ ಪೂವಣ್ಣ

(ಮೊದಲ ಪುಟದಿಂದ) ಪಡೆದಿದ್ದು, ಹಾಕಿಗೆ ಹೆಸರಾದ ಕೊಡಗಿನ ಹಾಕಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಈ ಹಿಂದೆ ಭಾರತ ಜೂನಿಯರ್ ತಂಡವನ್ನು ಪ್ರತಿನಿಧಿಸಿರುವ ಪೂವಣ್ಣ ಅವರು ಇದೀಗ ಸೀನಿಯರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ನ.೧೮ರಿಂದ ಡಿಸೆಂಬರ್ ೬ರತನಕ ನೆದರ್‌ಲ್ಯಾಂಡ್‌ನಲ್ಲಿ ನೆದರ್‌ಲ್ಯಾಂಡ್ ಹಾಗೂ ಬೆಲ್ಜಿಯಂ ರಾಷ್ಟçಗಳೊಂದಿಗಿನ ಹಾಕಿ ಪಂದ್ಯಾವಳಿಗೆ ಭಾರತ ತಂಡ ಪಾಲ್ಗೊಳ್ಳುತ್ತಿದೆ. ಭಾರತ ಸೀನಿಯರ್ ತಂಡಕ್ಕೆ ಕರ್ನಾಟಕದಿಂದ ಪೂವಣ್ಣ ಹಾಗೂ ಮಹಮದ್ ರಾಹಿಲ್ ಸೇರಿ ಇಬ್ಬರಿಗೆ ಅವಕಾಶ ದೊರೆತಿದೆ.

ಪೂವಣ್ಣ ಮೂಲತಃ ಕಂಡAಗಾಲದ ನಿವಾಸಿ ಚಂದುರ ಎಸ್. ಬಾಬಿ (ಪ್ರಭು) ಹಾಗೂ ಅನಿಲ (ತಾಮನೆ ಮಲ್ಲೇಂಗಡ) ದಂಪತಿಯ ಪುತ್ರ.