ಸಿದ್ದಾಪುರ, ನ. ೧೪: ಕ್ಷುಲ್ಲಕ ಕಾರಣಕ್ಕೆ ವಿವಾಹಿತ ಮಹಿಳೆಯೋರ್ವರು ಡೀಸೆಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಸಮೀಪದ ಇಂಜಿಲಗೆರೆ ಕಲ್ಲುಕೋರೆಯಲ್ಲಿ ನಡೆದಿದೆ.
ತನ್ಷಿ(೩೬) ಮೃತ ದುರ್ದೈವಿ. ತನ್ಷಿ ಇಂಜಿಲಗೆರೆಯ ಶಫೀಕ್ ಎಂಬಾತನೊAದಿಗೆ ಮದುವೆಯಾಗಿ ಇಂಜಿಲಗೆರೆ ಕಲ್ಲುಕೋರೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಶಫೀಕ್ ಸಂಬAಧಿ ಶಮೀರ್ ಎಂಬಾತ ತನ್ಷಿಯ ಖಾಸಗಿ ಚಿತ್ರಗಳನ್ನು ಹೊಂದಿರುವುದೆAದು ಸುಳ್ಳು ಆರೋಪಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದ ಸ್ಥಳೀಯರು ಗಂಭೀರವಾದ ಸುಟ್ಟ ಗಾಯಗೊಂಡಿದ್ದ ಮಹಿಳೆಯನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಮಹಿಳೆಯ ಆತ್ಮಹತ್ಯೆಗೆ ಸಂಬAಧಿ ಶಮೀರ್, ಆತನ ತಾಯಿ ಹಾಗೂ ಪತ್ನಿಯೇ ಕಾರಣ ಎಂದು ಮೃತ ಮಹಿಳೆಯ ಸಂಬAಧಿಕರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಮಡಿಕೇರಿ ವೃತ್ತ ನಿರೀಕ್ಷಕ ಪಿ.ಕೆ. ರಾಜು ಭೇಟಿ ನೀಡಿ ಪರಿಶೀಲಿಸಿದರು.