ಗೋಣಿಕೊಪ್ಪಲು, ನ. ೧೫: ಬಾಳೆಲೆಯ ರಾಷ್ಟಿçÃಕೃತ ಬ್ಯಾಂಕ್‌ವೊAದರಲ್ಲಿ ಕೃಷಿ ಮೇಲಿನ ಸಾಲದ ಅಸಲಿಗಿಂತ ಬಡ್ಡಿ ಹೆಚ್ಚಾಗಿ ಕೃಷಿಭೂಮಿಗಳು ಹರಾಜಿಗೆ ಬಂದಿದ್ದ ಪ್ರಕರಣವನ್ನು ‘ಒನ್ ಟೈಂ ಸೆಟಲ್‌ಮೆಂಟ್’ (ಒಟಿಎಸ್) ಮೂಲಕ ಇತ್ಯರ್ಥಗೊಳಿಸಿ ಸಾಲದ ಸಂಕೋಲೆಯಿAದ ರೈತರನ್ನು ಹೊರತರಲಾಯಿತು.

ಕಳೆದ ೧೫-೨೦ ವರ್ಷಗಳ ಹಿಂದೆ ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ರೈತರು ತಮ್ಮ ಜಮೀನು, ಮನೆ, ತೋಟಗಳನ್ನು ಅಡಮಾನವಿಟ್ಟು ಸಾಲ ಪಡೆದಿದ್ದರು. ರೈತರಿಗೆ ಉತ್ತಮ ಬೆಳೆಯಿಲ್ಲದೆ ಸಕಾಲದಲ್ಲಿ ಪಡೆದ ಸಾಲವನ್ನು ತೀರಿಸಲು ವಿಳಂಬವಾಗಿತ್ತು. ಅತೀವೃಷ್ಟಿ ಹಾಗೂ ಕೊರೊನಾ ಪರಿಸ್ಥಿತಿಯೂ ಸಾಲ ಮರುಪಾವತಿ ಮಾಡಲು ಸಮಸ್ಯೆಗೆ ಕಾರಣವಾಗಿತ್ತು. ಬಡ್ಡಿ ಹೆಚ್ಚಾದ ಕಾರಣದಿಂದ ಸಾಲವನ್ನು ಮರು ಪಾವತಿಸಲು ಸಾಧ್ಯವಾಗಿರಲಿಲ್ಲ. ಪಡೆದ ಸಾಲಕ್ಕೆ ಬ್ಯಾಂಕ್‌ಗಳು ಬಡ್ಡಿ, ಚಕ್ರಬಡ್ಡಿ ಸೇರಿದಂತೆ ಇನ್ನಿತರ ಬಡ್ಡಿಗಳನ್ನು ಸೇರಿಸಿ ಅಸಲಿಗಿಂತ ಬಡ್ಡಿಯೇ ಅಧಿಕವಾಗಿತ್ತು. ಅಂತಿಮವಾಗಿ ಬ್ಯಾಂಕಿನ ಕೆಲವು ಅಧಿಕಾರಿಗಳು ರೈತರ ಜಮೀನನ್ನು ಹರಾಜು ಮಾಡುವ ಹಂತಕ್ಕೂ ತಲುಪಿದ್ದರು. ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿದ್ದರು. ಈ ವೇಳೆ ರೈತರು ಹಾಗೂ ಬೆಳೆಗಾರರು ತಮ್ಮ ನೋವನ್ನು ರೈತ ಸಂಘದ ಗಮನಕ್ಕೆ ತಂದಿದ್ದರು.

ಈ ಹಿನ್ನೆಲೆ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಹಾಗೂ ಸಂಘದ ಪದಾಧಿಕಾರಿಗಳು ಕಳೆದ ೨೦ ದಿನಗಳ ಹಿಂದೆ ಬಾಳೆಲೆ ಗ್ರಾಮದಲ್ಲಿರುವ ಬ್ಯಾಂಕ್‌ನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ರೈತರ ಭೂಮಿಯನ್ನು ಹರಾಜು ಮಾಡದಂತೆ ಒತ್ತಾಯಿಸಿದ್ದರು.

ಅನಂತರ ಬ್ಯಾಂಕಿನ ಹಿರಿಯ ಅಧಿಕಾರಿಗಳು ರೈತ ಮುಖಂಡರುಗಳೊAದಿಗೆ ಸಭೆ ನಡೆಸಿ ಹಳೆಯ ಸಾಲಗಳನ್ನು ಒಂದೇ ಬಾರಿಗೆ ಕಟ್ಟುವ ಅವಕಾಶ ನೀಡಲಾಗುವುದು. ಇದಕ್ಕೆ ಬಡ್ಡಿಯಲ್ಲಿ ರಿಯಾಯಿತಿ ನೀಡುವ ಭರವಸೆ ನೀಡಿದ್ದರು.

ಇದಕ್ಕೆ ರೈತರು ಒಪ್ಪಿಗೆ ನೀಡಿದ ಹಿನ್ನೆಲೆ ಇಂದು ೨೧ ರೈತರು ಸಾಲವನ್ನು ಮರುಪಾವತಿಸುವ ಮೂಲಕ ಸಾಲದಿಂದ ಹೊರಬಂದು ನಿರಾಳರಾದರು.

ರೈತರು ಪಡೆದ ಸಾಲವನ್ನು ಎಂದಿಗೂ ಕಟ್ಟುವುದಿಲ್ಲವೆಂದು ಹಠಕ್ಕೆ ಬಿದ್ದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಉತ್ತಮ ಬೆಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಸಮಸ್ಯೆ ಎದುರಾಗಿದೆ. ಈ ಸಂದರ್ಭದಲ್ಲಿ ರೈತರು ಪಡೆದ ಸಾಲಕ್ಕೆ ಬ್ಯಾಂಕ್‌ಗಳು ವಿಪರೀತ ಬಡ್ಡಿ ಹಾಕುವ ಮೂಲಕ ತೊಂದರೆ ನೀಡಿದೆ. ಇದರಿಂದ ರೈತ ತಾನು ಪಡೆದ ಸಾಲವನ್ನು ತೀರಿಸಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಕೂಡ ರೈತರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಲಿಲ್ಲ. ಮುಂದೆ ಇಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳುಹಿಸಬಾರದು ರೈತರಿಗೆ, ಬೆಳೆಗಾರರಿಗೆ ತೊಂದರೆ ನೀಡಬಾರದು ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಒತ್ತಾಯಿಸಿದರು.

ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮನುಸೋಮಯ್ಯ ಹಲವು ರೈತರ ಸಾಲದ ಮರು ಪಾವತಿಯನ್ನು ಖುದ್ದಾಗಿ ನಿಂತು ಒಂದೇ ಕಂತಿನಲ್ಲಿ ಸಾಲವನ್ನು ಮುಗಿಸಿಕೊಟ್ಟರು. ಬ್ಯಾಂಕಿನ ಅಧಿಕಾರಿಗಳು ರೈತರಿಗೆ ಸ್ಪಂದನ ನೀಡಿದರು.

ಈ ವೇಳೆ ರೈತ ಸಂಘದ ಕೊಡಗು ಜಿಲ್ಲಾ ಪ್ರದಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶು ಸೇರಿದಂತೆ ಪೊನ್ನಂಪೇಟೆ ನಗರ ಅಧ್ಯಕ್ಷ ಚೊಟ್ಟೆಕಾಳಪಂಡ ಮನು ಸೇರಿದಂತೆ ಬಾಳೆಲೆ ಗ್ರಾಮದ ಹಿರಿಯರಾದ ಆಳಮೇಂಗಡ ಬೋಸ್ ಮಂದಣ್ಣ, ಮುಕ್ಕಾಟಿರ ಕಾವೇರಪ್ಪ, ಮಲ್ಚಿರ ಚಿಟ್ಟಿಯಪ್ಪ ನಾಣಯ್ಯ, ನಿಟ್ಟೂರುವಿನ ಚೆಕ್ಕೆರ ಸೂರ್ಯ ಅಯ್ಯಪ್ಪ, ಕಾಟಿಮಾಡ ಶರೀನ್ ಮುತ್ತಣ್ಣ ಮುಂತಾದವರು ಭಾಗವಹಿಸಿದ್ದರು.