ಮಡಿಕೇರಿ, ನ. ೧೫: ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಆರೋಪಿ ಗಳನ್ನು ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಕ್ಕೆ ಗ್ರಾಮದ ನಿವಾಸಿ ಎಸ್.ಕೆ. ಸೋಮೇಶೇಖರ್ (೨೪) ಹಾಗೂ ಹೊಳೆನರಸಿಪುರದ ಮಾಚಗೌಡನಹಳ್ಳಿ ನಿವಾಸಿ ಎನ್. ಅಭಿಷೇಕ್ (೨೪) ಬಂಧಿತ ಆರೋಪಿಗಳು.

ತಾ. ೩ ರಂದು ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಕ್ಕೆ ನಿವಾಸಿ ದೇವರಾಜು ಕುಟುಂಬ ದೀಪಾವಳಿ ಹಬ್ಬದ ಹಿನ್ನೆಲೆ ಸಂಬAಧಿಕರ ಮನೆಗೆ ತೆರಳಿದ್ದ ವೇಳೆಯಲ್ಲಿ ಬಾಗಿಲು ಮುರಿದು, ಲಾಕರ್‌ನಲ್ಲಿದ್ದ ಅಂದಾಜು ೨೧೯ ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಕುರಿತು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕೃತ್ಯಕ್ಕೆ ಸಂಬAಧಿಸಿದAತೆ ಮಾಹಿತಿ ಹಾಗೂ ಸಾಕ್ಷಾö್ಯಧಾರ ಕಲೆಹಾಕಿದ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ ಸಿಪಿಐ ಕೆ. ರಾಜೇಶ್, ಪಿಎಸ್‌ಐ ಮೋಹನ್ ರಾಜ್ ಹಾಗೂ ಪೊಲೀಸ್ ಸಿಬ್ಬಂದಿಗಳು ತಾ. ೧೩ ರಂದು ಆರೋಪಿಗಳನ್ನು ಬಂಧಿಸಿ ಅವರಿಂದ ಒಟ್ಟು ೧೬೮ ಗ್ರಾಂ ಚಿನ್ನಾಭರಣ, ರೂ. ೨.೫೪ ಲಕ್ಷ ನಗದು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.