ಮುಳ್ಳೂರು, ನ. ೧೫: ಸಮೀಪದ ರಾಮನಹಳ್ಳಿ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗುತ್ತಿದ್ದು ಹಾಡಹಗಲೆ ಪಕ್ಕದ ಕಾಡಿನಿಂದ ಬರುವ ಕಾಡುಕೋಣಗಳು ರೈತರ ಕಾಫಿತೋಟಗಳಿಗೆ ನುಸುಳಿ ಕಾಫಿಗಿಡಗಳನ್ನು ನಾಶಗೊಳಿಸುತಿವೆ. ಮಂಜುನಾಥ್ ಎಂಬವರ ಕಾಫಿತೋಟಕ್ಕೆ ಅರಣ್ಯದಿಂದ ಬಂದ ೪ ಕಾಡುಕೋಣಗಳು ಕಾಫಿತೋಟದೊಳಗೆ ಕಾಣಿಸಿಕೊಂಡಿದ್ದು, ತೋಟದಲ್ಲಿ ನೂರಕ್ಕಿಂತ ಹೆಚ್ಚಿನ ಫಸಲು ಬಿಟ್ಟಿದ್ದ ಕಾಫಿಗಿಡಗಳನ್ನು ಹಾನಿ ಮಾಡಿವೆ. ಕೆಲವು ದಿನಗಳಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಕಾಡುಕೋಣಗಳು ತೋಟದಲ್ಲಿ ಕಾಫಿಗಿಡಗಳನ್ನು ಹಾನಿ ಮಾಡುತ್ತಿರುವುದಾಗಿ ಕಾಫಿತೋಟದ ಮಾಲೀಕರು ತಿಳಿಸಿದ್ದಾರೆ.