ಕುಶಾಲನಗರ, ನ. ೧೫: ಕೊಡಗು ಎಜುಕೇಶನಲ್ ಅಂಡ್ ಸೋಷಿಯಲ್ ಸರ್ವೀಸ್ ಟ್ರಸ್ಟ್ ಆಶ್ರಯದಲ್ಲಿ ರಕ್ಷಣಾ ಇಲಾಖೆಗೆ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಡಿಸೆಂಬರ್ ೧ ರಂದು ಕುಶಾಲನಗರದಲ್ಲಿ ಗುಡ್ಡಗಾಡು ಓಟ ಆಯೋಜಿಸಲಾಗಿದೆ.
ಗುಡ್ಡಗಾಡು ಓಟ (ಅಡಿoss ಅouಟಿಣಡಿಥಿ) ಯುವಕರಿಗೆ ೭ ಕಿ.ಮೀ. ಹಾಗೂ ಯುವತಿಯರಿಗೆ ೪ ಕಿ.ಮೀ. ದೂರದ ಓಟವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಮುಖರಾದ ಕ್ಯಾಪ್ಟನ್ ಪಿ.ಎಸ್ ಕಾರ್ಯಪ್ಪ ತಿಳಿಸಿದ್ದಾರೆ.
೨೦೦೪ ಜೂನ್ ನಂತರ ಜನಿಸಿದವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಆಸಕ್ತ ಯುವಕರು ಮತ್ತು ಯುವತಿಯರು ತಮ್ಮ ಹುಟ್ಟಿದ ದಿನಾಂಕ ಮತ್ತು ಆಧಾರ್ ಕಾರ್ಡ್ ಪ್ರತಿ ತೋರಿಸಿ ನೋಂದಣಿ ಮಾಡಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓಟದಲ್ಲಿ ವಿಜೇತ ಯುವಕರಿಗೆ ಪ್ರಥಮ ಬಹುಮಾನ: ರೂ. ೧೦,೦೦೦, ದ್ವಿತೀಯ ರೂ. ೮,೦೦೦ ತೃತೀಯ ರೂ. ೬,೦೦೦ ೪ನೇ ಬಹುಮಾನ ರೂ. ೪,೦೦೦ ೫ನೇ ರೂ. ೩,೦೦೦ ೬ನೇ ಬಹುಮಾನವಾಗಿ ರೂ. ೨,೦೦೦ ನೀಡಲಾಗುವುದು. ವಿಜೇತ ಯುವತಿಯರಿಗೆ ಪ್ರಥಮ ರೂ. ೬೦೦೦, ದ್ವಿತೀಯ ೫೦೦೦, ತೃತೀಯ ೪,೦೦೦, ೪ನೇ -೩೦೦೦, ೫ನೇ ೨೦೦೦ ಮತ್ತು ಆರನೇ ಬಹುಮಾನವಾಗಿ ರೂ. ೧೦೦೦ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ನೋಂದಣಿಗಾಗಿ ಮೊಬೈಲ್ ಸಂಖ್ಯೆ ೮೧೨೩೬೭೬೨೭೦, ೮೩೧೦೫೭೮೫೭೪ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: ೯೪೪೯೪೭೫೫೦೨ ಸಂಪರ್ಕಿಬಹುದು. ನೋಂದಣಿ ಮಾಡಲು ಕೊನೆಯ ದಿನಾಂಕ:೨೫.೧೧.೨೪ ಭಾಗವಹಿಸಿದ ಎಲ್ಲರಿಗೂ ತಿಂಡಿ ಕಾಫಿ ವ್ಯವಸ್ಥೆ ಇರುತ್ತದೆ. ಸ್ಪರ್ಧೆ ಆರಂಭ ಬೆಳಿಗ್ಗೆ ೬ ಗಂಟೆಗೆ ಸ್ಥಳ-ಸರ್ಕಾರಿ ಪದವಿಪೂರ್ವ ಕಾಲೇಜು ಕುಶಾಲನಗರ. ಎಂದು ಕಾರ್ಯಕ್ರಮ ಆಯೋಜಕರಾದ ಅಮೆ ಜನಾರ್ದನ್ ಮಾಹಿತಿ ನೀಡಿದ್ದಾರೆ.