ನಾಪೋಕ್ಲು, ನ. ೧೫: ನವಜಾತ ಶಿಶು ಸಾವಿನ ಪ್ರಕರಣ ಸಂಬAಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ನಾಪೋಕ್ಲು ಸಮೀಪದ ಗ್ರಾಮವೊಂದರ ನಿವಾಸಿ ಅಪ್ರಾಪ್ತ ಬಾಲಕಿಗೆ ಜನಿಸಿದ್ದ ಮಗು ಹುಟ್ಟಿದ ಬಳಿಕ ನಿಗೂಢವಾಗಿ ನಾಪತ್ತೆಯಾಗಿ ಮೃತದೇಹ ಪತ್ತೆಯಾಗಿತ್ತು. ಈ ಸಂಬAಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಇದೀಗ ಮಗುವಿನ ತಾಯಿ, ಅಜ್ಜಿ, ತಾತ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ನವಜಾತ ಶಿಶು ಹುಟ್ಟಿ ವಾರದ ಬಳಿಕ ಆರೋಪಿಗಳ ಮನೆಯಿಂದ ಅನತಿ ದೂರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತ್ತೆಯಾಗಿದ್ದ ಮಗುವಿನ ಶರೀರವನ್ನು ಮಗುವಿನ ಅಜ್ಜಿ ಕೊಂದು ಬಿಸಾಡಿದ ಶಂಕೆ ಇತ್ತು. ಈ ಸಂಬAಧ ಆರೋಗ್ಯ ಕಾರ್ಯಕರ್ತೆ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು.