ಮಡಿಕೇರಿ, ನ. ೧೫: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆಯಡಿ ದೇಶದ ಯುವ ಜನತೆಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಅವಕಾಶಗಳನ್ನು ಒದಗಿಸಲು ಪ್ರಾರಂಭಿಸಲಾಗಿದೆ.
ಈ ಯೋಜನೆಯಡಿ ದೇಶದ ೫೦೦ ಪ್ರತಿಷ್ಠಿತ ಕಂಪೆನಿಗಳಲ್ಲಿ ೨೧ ರಿಂದ ೨೪ ವಯಸ್ಸಿನ ಯುವಜನತೆಗೆ ೧೨ ತಿಂಗಳ ಅವಧಿಯವರೆಗೆ ಇಂಟರ್ನ್ಶಿಪ್ ಯೋಜನೆಗೆ ಅವಕಾಶ ಕಲ್ಪಿಸಲಾಗುತ್ತದೆ ಹಾಗೂ ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆಯು ವೃತ್ತಿ ಜೀವನವನ್ನು ಪ್ರಾರಂಭಿಸಲು ಪರಿಪೂರ್ಣ ಅವಕಾಶ ಒದಗಿಸುತ್ತದೆ. ಹೈಸ್ಕೂಲ್ ಅಥವಾ ಹೈಯರ್ ಸೆಕೆಂಡರಿ, ಐಟಿಐ, ಡಿಪ್ಲೋಮಾ, ಪದವಿ (ಬಿ.ಎ, ಬಿ.ಕಾಂ, ಬಿ.ಸಿ.ಎ, ಬಿ.ಬಿ.ಎ, ಬಿ.ಫಾರ್ಮ ಇತ್ಯಾದಿ) ಶಿಕ್ಷಣ ಪೂರ್ಣಗೊಳಿಸಿರುವ ಭಾರತೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತರು ಅಧಿಕೃತ ವೆಬ್‌ಸೈಟ್ hಣಣಠಿs://ಠಿmiಟಿಣeಡಿಟಿshiಠಿ.mಛಿಚಿ.gov.iಟಿ/ಟogiಟಿ/ ಮೂಲಕ ನೋಂದಾಯಿಸಿ ಕೊಳ್ಳುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.