ವೀರಾಜಪೇಟೆ, ನ. ೧೫: ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ನಿರಂತರವಾಗಿ ಆನೆ ದಾಳಿ ನಡೆಯುತ್ತಿದ್ದು, ಈ ಭಾಗದ ರೈತರು ಕಂಗಾಲಾಗಿದ್ದಾರೆ.ಈ ವಾರ ಎರಡು ಬಾರಿ ಆನೆಗಳ ಹಿಂಡು ಭತ್ತದ ಗದ್ದೆಗಳಿಗೆ ನುಗ್ಗಿ ಕಟಾವಿಗೆ ಸಿದ್ದವಾಗಿದ್ದ ಭತ್ತದ ಬೆಳೆಯನ್ನು ನಾಶಪಡಿಸಿವೆ. ಈ ವರ್ಷದಲ್ಲಿ ಒಟ್ಟು ಎಂಟು ಬಾರಿ ಮಗ್ಗುಲ ಗ್ರಾಮದ ಗದ್ದೆಗಳಿಗೆ ಆನೆಗಳ ಹಿಂಡು ಲಗ್ಗೆಯಿಟ್ಟು ಸ್ಥಳೀಯ ರೈತರು ಹೈರಾಣಾಗಿದ್ದಾರೆ.
ಭತ್ತದ ಕೃಷಿಯನ್ನು ಲಾಭದಾಯಕವಲ್ಲದಿದ್ದರೂ ಮಾಡುತ್ತಾ ಬಂದಿದ್ದು ಕಳೆದ ಐದು ವರ್ಷಗಳಿಂದ ಆನೆಗಳು ನಷ್ಟ ಮಾಡಲು ಆರಂಭಿಸಿದೆ. ಇದರಿಂದ ಮುಂದಕ್ಕೆ ಭತ್ತದ ಕೃಷಿಯನ್ನು ಕೈ ಬಿಡಲು ಚಿಂತನೆ ನಡೆಸುತ್ತಿದ್ದೇನೆ ಎಂದು ಸುಮಾರು ಆರು ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಿರುವ ಸ್ಥಳೀಯ ಪ್ರಗತಿಪರ ರೈತ ಪುಲಿಯಂಡ ಜಗದೀಶ್ ಹತಾಶರಾಗಿ ಪ್ರತಿಕ್ರಿಯೆ ನೀಡಿದರು.