ವೀರಾಜಪೇಟೆ, ನ. ೧೫: ಮದ್ಯದ ಅಮಲಿನಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ವೀರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ನಡೆದಿದೆ. ಮೂಲತಃ ಮಾಲ್ದಾರೆ ನಿವಾಸಿ ಜೇನುಕುರುಬರ ದಾಸ (೫೦) ಕೊಲೆಯಾದ ವ್ಯಕ್ತಿ. ಬಿಟ್ಟಂಗಾಲದ ಲೈನ್‌ಮನೆಯ ನಿವಾಸಿ ಮಂಜು (೩೨) ಬಂಧಿತ ಆರೋಪಿ.

ವೀರಾಜಪೇಟೆ ಹೊರವಲಯದ ಬಿಟ್ಟಂಗಾಲ ಸಮೀಪದ ನಾಯಡ ಅಪ್ಪಚ್ಚ್ಚು ಎಂಬವರಿಗೆ ಸೇರಿದ ಲೈನ್‌ಮನೆಯಲ್ಲಿ ದಾಸ ಹಾಗೂ ಮಂಜು ಅಕ್ಕಪಕ್ಕದ ಮನೆಗಳಲ್ಲಿ ವಾಸವಿದ್ದರು. ಇವರಿಬ್ಬರ ನಡುವೆ ಕ್ಷÄಲ್ಲಕ ಕಾರಣಕ್ಕೆ ಆಗಾಗ್ಗೆ ಜಗಳ ನಡೆಯುತಿತ್ತು. ತಾ. ೧೪ ರಂದು ಎಂದಿನAತೆ ಕಾಫಿ ತೋಟದ ಕೆಲಸ ಮುಗಿಸಿ ಬಂದ ಇಬ್ಬರ ನಡುವೆ ಕಲಹ ಏರ್ಪಟ್ಟಿದೆ. ಇಬ್ಬರು ಮದ್ಯ ಸೇವಿಸಿದ್ದ ಹಿನ್ನೆಲೆ ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೆ ತಿರುಗಿದೆ.

ಈ ವೇಳೆ ಮಾರಕಾಯುಧದಿಂದ ದಾಸನ ತಲೆ ಭಾಗಕ್ಕೆ ಮಂಜು ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಪರಿಣಾಮ ದಾಸ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದು, ತಾ. ೧೫ ರ ಬೆಳಿಗ್ಗೆ

(ಮೊದಲ ಪುಟದಿಂದ) ಕಾರ್ಮಿಕರನ್ನು ಕರೆದೊಯ್ಯಲು ಆಗಮಿಸಿದ ಸಂದರ್ಭ ವಾಹನ ಚಾಲಕನಿಗೆ ವಿಷಯ ತಿಳಿದಿದೆ.

ತಕ್ಷಣವೇ ತೋಟದ ಮಾಲೀಕರಿಗೆ ಚಾಲಕ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಆರೋಪಿ ಮಂಜು ವಿರುದ್ಧ ೧೦೩ ಬಿ.ಎನ್.ಎಸ್ ಕಾಯ್ದೆ ಅನ್ವಯ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

-ಕಿಶೋರ್ ಕುಮಾರ್ ಶೆಟ್ಟಿ