ಚೆಟ್ಟಳ್ಳಿ, ನ. ೧೫: ದೇಶವು ಡಿಜಿಟಲೀಕರಣದ ಮೂಲಕ ಆರ್ಥಿಕ ಆಭಿವೃದ್ಧಿಯತ್ತ ಸಾಗಿದ್ದು ಮುಂದಿನ ಹತ್ತು ವರ್ಷಗಳಲ್ಲಿ ಬಲಿಷ್ಠ ರಾಷ್ಟçದ ಪಟ್ಟಿಯಲ್ಲಿ ೩ನೇ ಸ್ಥಾನ ತಲುಪಲಿದೆ. ದೇಶವು ಆರ್ಥಿಕತೆಯಲ್ಲಿ ಮುಂದು ವರಿದರೆ ದೇಶದ ಅಭಿವೃದ್ಧಿಯ ಜೊತೆಗೆ ಬಡತನ ನಿರ್ಮೂಲನ ವಾಗಲಿದೆ. ಕೇಂದ್ರ ಸರಕಾರವು ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಕ್ಷೇತ್ರವನ್ನು ಅಬಿವೃದ್ಧಿ ಪಡಿಸುತ್ತಿದ್ದು ರಾಜ್ಯಸರಕಾರವು ನೂತನ ನಿಯಮವನ್ನು ಜಾರಿಗೊಳಿಸುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆರ್ಥಿಕ ಶಕ್ತಿಗಳಾಗಿ ಸಾಗಬೇಕೆಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಲ ನಿಯಮಿತ, ಬೆಂಗಳೂರು ಕೊಡಗು ಜಿಲ್ಲಾ ಸಹಕಾರಿ ಯೂನಿಯನ್ ಮಡಿಕೇರಿ ಸಹಕಾರ ಇಲಾಖೆ, ಕೊಡಗು ಜಿಲ್ಲೆ ಹಾಗು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,ಇವರ ಸಂಯುಕ್ತ ಆಶ್ರಯದಲ್ಲಿ ನವಂಬರ್ ೧೪ ನೇ ಗುರುವಾರ ದಂದು ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ ಹಾಗೂ ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳುವಳಿಯನ್ನು ಬಲಪಡಿಸುವ ದಿನಾಚರಣೆ ಚೆಟ್ಟಳ್ಳಿಯ ನರೇಂದ್ರ ಮೋದಿ ಸಹಕಾರ ಭವನದಲ್ಲಿ ಜರುಗಿತು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ .ಕೆ. ಮನು ಮುತ್ತಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚೆಟ್ಟಳ್ಳಿಯ ಸಹಕಾರ ಸಂಘವು ರೈತರಿಗೆ ವಿವಿಧ ಸವಲತ್ತನ್ನು ನೀಡುವ ಮೂಲಕ ರೈತರ ಏಳಿಗೆಗೆ ಶ್ರಮಿಸುತ್ತಾ ಸಹಕಾರ ಕ್ಷೇತ್ರದಲ್ಲಿ ಮಾದರಿಯಾಗಿ ದೆಂದರು. ಮಾಜಿ ಅಧ್ಯಕ್ಷರಾದ ಬಿದ್ದಂಡ ಎ. ಅಚ್ಚಯ್ಯ ಅವರು ಸಹಕಾರ ಸಂಘದ ಧ್ವಜಾರೋಹಣ ನೆರವೇರಿಸುವ ಮೂಲಕ ಸಹಕಾರ ಗೀತೆಯನ್ನು ಹಾಡಿದರು.
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಪ್ರತೀ ವರ್ಷ ನವಂಬರ್ ೧೪ ರಿಂದ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಈ ಬಾರಿ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಉದ್ಘಾಟನೆ ನಡೆಯುತ್ತಿರುವುದು ಹೆಮ್ಮೆ ಎಂದರು. ಸಹಕಾರ ಸಂಘದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ನಡೆಯ ಬಾರದು. ಈಗಿನ ರಾಜ್ಯ ಸರಕಾರ ಸಹಕಾರ ಸಂಘಕ್ಕೆ ರಾಜಕೀಯ ನಡೆಸುತ್ತಿರುವುದು ಸರಿಯಲ್ಲ. ಚೆಟ್ಟಳ್ಳಿ ಸಹಕಾರ ಸಂಘಕ್ಕೂ ಕೆಲವರು ರಾಜಕೀಯವಾಗಿ ತೊಂದರೆ ನೀಡುತ್ತಿದ್ದು, ಕಾನೂನಿನ ಮೂಲಕವೇ ಉತ್ತರಿಸಲು ಸಿದ್ದರಿರುವುದಾಗಿ ಹೇಳಿದರು.
ಕೆ.ಐ.ಸಿ.ಎಂ. ಮಡಿಕೇರಿಯ ಪಾಂಶುಪಾಲೆ ಡಾ.ಆರ್.ಎಸ್. ರೇಣುಕಾ ಅವರು ದಿನದ ಮಹತ್ವದ ಕುರಿತು ಮಾತನಾಡಿ ಸಹಕಾರ ಸಂಘವು ನಡೆದು ಬಂದ ದಾರಿ,ವಿವಿಧ ಯೋಜನೆಗಳು, ಹೊಸ ಸಹಕಾರ ನೀತಿ,ಸಂಘದ ಅಭಿವೃದ್ಧಿಯ ಗುರಿ, ಕೇಂದ್ರದ ಹಾಗು ರಾಜ್ಯ ಸರಕಾರದ ಹಸಿವು ಮುಕ್ತ ಭಾರತದ ಯೋಜನೆಯ ಬಗ್ಗೆ ವಿವರಿಸಿದರು.
ಸನ್ಮಾನ : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ಮಡಿಕೇರಿ ಹಾಗೂ ಕೊಡಗು
ಜಿಲ್ಲಾ ಸಹಕಾರ
(ಮೊದಲ ಪುಟದಿಂದ) ಯೂನಿಯನ್ ಮಡಿಕೇರಿಯ ನಿರ್ದೇಶಕರಾದ ನಾಪಂಡ ಉಮೇಶ್ ಉತ್ತಪ್ಪನವರು ಚೆಟ್ಟಳ್ಳಿ ಸಹಕಾರ ಸಂಘಗಳಲ್ಲಿ ದುಡಿದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳಿಗೆ ಸನ್ಮಾನಿಸಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಪಿ.ಸಿ. ಮನು ರಾಮಚಂದ್ರ ಉಪಾಧ್ಯಕ್ಷರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರುಗಳಾದ ಬಿದ್ದಾಟಂಡ. ಎ. ರಮೇಶ್ ಚಂಗಪ್ಪ, ನಂದಿನೆರವAಡ .ಎ. ರವಿ ಬಸಪ್ಪ , ಪಿ.ಸಿ. ಅಚ್ಚಯ್ಯ, ಪಿ.ಬಿ. ಯತೀಶ್, ಜಿ.ಆರ್. ವಿಜಯ್ ಕುಮಾರ್, ಸಹಕಾರ ಸಂಘಗಳ ಉಪನಿಬಂಧಕರು ಕೊಡಗು ಜಿಲ್ಲೆ, ಮಡಿಕೇರಿ, ಶೈಲಜಾ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಡಿಕೇರಿ ಉಪವಿಭಾಗ, ಪೇರಿಯನ ಎಸ್. ಪೂಣಚ್ಚ ಉಪಾಧ್ಯಕ್ಷರು, ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ, ಹಾಗೂ ಸಂಘದ ನಿರ್ದೇಶಕರು ವೇದಿಕೆಯಲ್ಲಿದ್ದರು.
ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪನವರು ಚೆಟ್ಟಳ್ಳಿ ಸಹಕಾರ ಸಂಘದ ಅಭಿವೃದ್ಧಿಗೆ ದುಡಿದಿದ್ದು ಚೆಟ್ಟಳ್ಳಿ ಸಹಕಾರಿಗಳ ಪರವಾಗಿ . ಬಲ್ಲಾರಂಡ ಮಣಿ ಉತ್ತಪ್ಪ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸ ಬೇಕೆಂದು ಸಂಘದ ಮಾಜಿ ಉಪಾಧ್ಯಾಯ ಕಣಜಾಲು ಪೂವಯ್ಯ ಒತ್ತಾಯಿಸಿದರು.
ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ನಂದಿನಿ ಕೆ.ಎಸ್ ಪ್ರಾರ್ಥಿಸಿ, ನಿರ್ದೇಶಕ ಅಕ್ಕಾರಿ ದಯಾನಂದ ಸ್ವಾಗತಿಸಿ ಕೊ.ಜಿ.ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ವಂದಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.