ಶನಿವಾರಸಂತೆ, ನ. ೧೫: ಸಮೀಪದ ಹಂಡ್ಲಿ ಗ್ರಾಮದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಉತ್ತರ ಪ್ರದೇಶದ ನೊಯ್ಡಾ ವಿಷನ್ ಸ್ಟಿçಂಗ್ ಸಂಸ್ಥೆ ವತಿಯಿಂದ ಹಿಂದೂ ಜಾಗರಣಾ ವೇದಿಕೆ ಪದಾಧಿಕಾರಿ ಪುನೀತ್ ತಾಳೂರು ಹಾಗೂ ವಿ.ಎಸ್.ಎಸ್.ಎನ್. ಬ್ಯಾಂಕ್ ನಿರ್ದೇಶಕ ವೀರೇಂದ್ರ ಕುಮಾರ್ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರ ನಡೆಯಿತು.

ಶಿಬಿರ ಉದ್ಘಾಟಿಸಿದ ವಿಷನ್ ಸ್ಪಿçಂಗ್ ಸಂಸ್ಥೆಯ ವೈದ್ಯಾಧಿಕಾರಿ ಡಾ. ಪುಷ್ಪೆಂದರ್ ಮಾತನಾಡಿ, ಪಂಚೇAದ್ರಿಯಗಳಲ್ಲಿ ಕಣ್ಣು ಪ್ರಧಾನ ಅಂಗವಾಗಿದ್ದು; ಅದರ ಸುರಕ್ಷತೆಯ ಬಗ್ಗೆ ನಿರ್ಲಕ್ಷö್ಯ ತಾಳದೆ ಸದಾ ಜಾಗೃತರಾಗಿರಬೇಕು ಎಂದರು.

ಹಿAದೂ ಜಾಗರಣಾ ವೇದಿಕೆ ಪದಾಧಿಕಾರಿ ಪುನೀತ್ ತಾಳೂರು ಮಾತನಾಡಿ, ಗ್ರಾಮೀಣ ಭಾಗದ ರೈತರು, ಕೂಲಿಕಾರ್ಮಿಕರ, ಬಡಜನತೆಯ ಆರೋಗ್ಯದ ದೃಷ್ಟಿಯಿಂದ ಹಂಡ್ಲಿ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಿ.ಎಸ್.ಎಸ್.ಎನ್. ಬ್ಯಾಂಕ್ ನಿರ್ದೇಶಕ ವೀರೇಂದ್ರ ಕುಮಾರ್ ಮಾತನಾಡಿ, ಮನುಷ್ಯನಿಗೆ ಕಣ್ಣು ಬಹಳ ಮುಖ್ಯ ಅಂಗವಾಗಿದ್ದು, ಕಣ್ಣಿನ ರಕ್ಷಣೆ ಬಗ್ಗೆ ಉದಾಸೀನತೆ ತೊರಬಾರದು ಎಂದರು.

ಶಿಬಿರದಲ್ಲಿ ೧೩೧ ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಸ್ಥಳದಲ್ಲೇ ೮೦ ಮಂದಿಗೆ ಕನ್ನಡಕ ವಿತರಿಸಲಾಯಿತು. ಉಳಿದ ೫೧ ಮಂದಿಗೆ ೨೦ ದಿನಗಳ ನಂತರ ಕನ್ನಡಕ ವಿತರಿಸಲಾಗುವುದು ಎಂದು ತಿಳಿಸಿದರು. ವಿಷನ್ ಸ್ಪಿçಂಗ್ ಸಂಸ್ಥೆಯ ಸಿಬ್ಬಂದಿ ಆಶಿಶ್ ಚೌದರಿ, ಅಜಯ್, ಅಮಿತ್ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸಿದರು.