ಮಡಿಕೇರಿ, ನ. ೧೫ : ವಿಭಿನ್ನ, ವಿಶಿಷ್ಟ ಸಂಸ್ಕೃತಿಯುಳ್ಳ ಕೊಡವ ಜನಾಂಗದ ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಿಕೊಂಡು ಹೋಗುವ ಹಾಗೂ ಮುಂದಿನ ಪೀಳಿಗೆಯಲ್ಲಿ ಅಭಿಮಾನ ಹುಟ್ಟಿಸುವ ಕೆಲಸ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಆಗಬೇಕಿದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.
ಅರೆಕಾಡುವಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯಿಂದ ನಡೆದ ‘ನಾಡೊರ್ಮೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡವ ಸಾಂಸ್ಕೃತಿಕ ಹಬ್ಬವನ್ನು ಆಚರಿಸುವುದರೊಟ್ಟಿಗೆ ಆಯಾಯ ಊರು-ನಾಡಿನ ಯುವ ಜನಾಂಗದ ಪಾಲ್ಗೊಳ್ಳುವಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಆಗಬೇಕಿದೆ. ಹೊರಗೆ ನೆಲೆಸಿರುವ ಯುವಕರನ್ನು ಕೊಡಗಿನಲ್ಲಿಯೇ ನೆಲೆಸುವಂತೆ ಮಾಡಬೇಕು. ಕೊಡವ ಅಕಾಡೆಮಿಯ ಕೆಲಸ-ಕಾರ್ಯಗಳಿಗೆ ಉತ್ತೇಜನ ನೀಡುವ ಸಲುವಾಗಿ ತಾನು ವೈಯಕ್ತಿಕವಾಗಿ ಹಾಗೂ ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡವ ಆಚಾರ-ವಿಚಾರ, ಸಂಸ್ಕೃತಿ ದೇಶದಲ್ಲೇ ಅಗ್ರಸ್ಥಾನದಲ್ಲಿ ನಿಲ್ಲುವಂತದ್ದು. ಇಂತಹ ಹಿರಿಮೆಯುಳ್ಳ ಸಂಸ್ಕೃತಿಯನ್ನು ಕೊಡವ ಜನಾಂಗ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ. ಕೊಡಗಿನಲ್ಲಿ ಆಸ್ತಿ-ಪಾಸ್ತಿಯನ್ನು ಉಳಿಸಿಕೊಂಡು ಹೋದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ.
ಇರುವ ಭೂಮಿ-ತೋಟಗಳನ್ನು ಪರಿವರ್ತಿಸಿ ನಿವೇಶನ ಮಾಡುವಂತದ್ದು ತಪ್ಪಬೇಕು. ನಮ್ಮ ಭೂಮಿ-ಆಸ್ತಿ ಎಂದಿಗೂ ನಮ್ಮ ಒಡೆತನದಲ್ಲಿಯೇ ಇರುವಂತಾಗಬೇಕು. ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಇವೆಲ್ಲ ಪೂರಕವಾಗಿದ್ದು ಗದ್ದೆಯನ್ನು ನೆಡುವ ಕೆಲಸ ಮುಂದಿನ ದಿನಗಳಲ್ಲಿ ಸರ್ಕಾರದ ಸಬ್ಸಿಡಿಯೊಂದಿಗೆ ಆಗಬೇಕಿದೆ ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಮಾತನಾಡಿ, ಕೊಡವ ಸಂಸ್ಕೃತಿಯು ಈ ನೆಲದ ಅಸ್ಮಿತೆಯಾಗಿದ್ದು, ಪ್ರಪಂಚದೆಲ್ಲೆಡೆ ಕೊಡವ ಸಂಸ್ಕೃತಿ-ಸಾಹಿತ್ಯದ ಕಂಪು ಪಸರಿಸುವ ಕೆಲಸವಾಗಬೇಕಿದೆ. ನಮ್ಮ ಭಾಷೆ, ಸಂಸ್ಕೃತಿ ಹಾಗೂ ನೆಲದ ಮೇಲಿನ ಅಭಿಮಾನ-ಹಕ್ಕನ್ನು ಪುನರ್‌ಸ್ಥಾಪಿಸುವುದರ ಮೂಲಕ ಸಂಸ್ಕೃತಿಯ ವೈಭವ ಮರುಕಳುಹಿಸುವಂತಾಗಬೇಕು ಎಂದು ನುಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮಗಳು ಜನಾಂಗದ ಸಂಸ್ಕೃತಿ ಹಾಗೂ ಭಾಷೆಗೆ ಹೊಂದಿಕೊAಡAತೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ.
ಕೊಡವ ಅಕಾಡೆಮಿಯ ಇಂತಹ ಪ್ರತಿಯೊಂದೂ ಕಾರ್ಯಕ್ರಮ ಆಧುನಿಕ ತಂತ್ರಜ್ಞಾನದಲ್ಲಿ ಅಳವಡಿಸಿ ಕೊಳ್ಳುವಂತಾಗಬೇಕು. ಹಾಗಿದ್ದರೆ ಮಾತ್ರ ಮುಂದಿನ ಸಾವಿರಾರು ವರ್ಷಗಳು ಕಳೆದರೂ ಅವುಗಳನ್ನು ನೋಡಿ ಆನಂದಿಸಲು ಸಾಧ್ಯ ಎಂದರು.
ಅಂತೆಯೇ, ಅಕಾಡೆಮಿಯ ಮುಂದಿನ ಮೂರು ತಿಂಗಳಮಟ್ಟಿಗಿನ ಪ್ರತಿಯೊಂದು ಕಾರ್ಯಕ್ರಮಗಳನ್ನು ಮುಂಚಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವಂತಾದರೆ ಆಯಾಯ ಭಾಗದ, ಊರು-ನಾಡಿನ ಜನತೆ ಪೂರ್ವ ತಯಾರಿ ಮಾಡಿಕೊಳ್ಳಲು ಹಾಗೂ ಆಚರಣೆಗಳು, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕೊಡವ ಸಂಸ್ಕೃತಿ, ಭಾಷೆಯ ಬೆಳವಣಿಗೆ ಹಾಗೂ ಉತ್ತೇಜನ ಕೊಡಗಿನ ಮೂಲನಿವಾಸಿಗಳ ಅನ್ಯೋನ್ಯತೆ ಹಾಗೂ ಸೌಹಾರ್ದಯುತವಾದ ಬಾಳ್ವೆಯಿಂದ ಸಾಧ್ಯ. ಪ್ರತಿಯೊಬ್ಬರೂ ಅವರವರ ಸಂಸ್ಕೃತಿ, ಭಾಷೆಯನ್ನು ಪ್ರೀತಿಸುವುದರ ಮೂಲಕ ತಮ್ಮತನ ಉಳಿಸಿಕೊಳ್ಳಬೇಕು. ಕೊಡವ ಸಾಹಿತ್ಯ ಅಕಾಡೆಮಿಯಿಂದ ನಡೆಯುತ್ತಿರುವ ವಿನೂತನ ಕಾರ್ಯಕ್ರಮಗಳು ಕೊಡವ ಸಾಂಸ್ಕೃತಿಕ ಲೋಕದಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಿರುವುದು ಸಂತೋಷವಾಗಿದೆ ಎಂದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಿತವಾದ ‘ಕೊಡವೋಲೆ’ ತ್ರೆöÊಮಾಸಿಕ ಸಂಚಿಕೆಯನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಬಿಡುಗಡೆಗೊಳಿಸಿದರು.
ಅರೆಕಾಡು-ಹೊಸ್ಕೇರಿ ಗ್ರಾಮದ ತೊಂಡಿಯAಡ ವಾಸು ನಾಣಯ್ಯ, ಬಲ್ಲಚಂಡ ಶಂಭು ಸೋಮಯ್ಯ, ಅಣ್ಣಾರ್‌ಕಂಡ ಪ್ರೇಮ್ ಅಯ್ಯಪ್ಪ, ಕಾಡುಮಂಡ ವಿನೋದ್ ತಿಮ್ಮಯ್ಯ, ಬಲ್ಲಾರಂಡ ಅಭಿನ್ ಮುತ್ತಣ್ಣ ಹಾಗೂ ಉದ್ಯಮಿ ಮುಕ್ಕಾಟಿರ ವಿನಯ್-ಶಿಲ್ಪ ದಂಪತಿಯನ್ನು ಅಕಾಡೆಮಿ ಹಾಗೂ ಕೊಡವ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ‘ಅರೆಕಾಡು-ಹೊಸ್ಕೇರಿ ನಾಡೊರ್ಮೆ’ಯ ಯಶಸ್ಸಿಗೆ ಕಾರಣಕರ್ತರಾದ ಕೊಡವ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯರನ್ನು ಕೊಡವ ಅಸೋಸಿಯೇಶನ್ ವತಿಯಿಂದ ಸನ್ಮಾನಿಸಲಾಯಿತು.