ಮಡಿಕೇರಿ, ನ. ೧೫: ಕ್ರೀಡಾ ತವರು ಕೊಡಗಿನಲ್ಲಿ ಮೊದಲನೆ ಬಾರಿಗೆ ಆಯೋಜನೆಗೊಂಡಿದ್ದ ರಾಷ್ಟಿçÃಯ ಮಟ್ಟದ ಕಿಕ್ ಬಾಕ್ಸಿಂಗ್ ಟೂರ್ನಿಯು ಕ್ರೀಡಾಪ್ರೇಮಿಗಳ ಗಮನ ಸೆಳೆಯಿತು. ಕೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕಿಂಬರ್ಲಿ ಕೂರ್ಗ್, ಕರ್ನಾಟಕ ಕಿಕ್ ಬಾಕ್ಸಿಂಗ್ ಲೀಗ್, ಕಿಕ್ ಬಾಕ್ಸಿಂಗ್ ಇಂಡಿಯಾ ಲೀಗ್ ಸಹಕಾರದಲ್ಲಿ ೪ ದಿನಗಳ ಕಾಲ ನಗರದ ಗಾಂಧಿ ಮೈದಾನದಲ್ಲಿ ನಡೆದ ಟೂರ್ನಿಯು ಪ್ರದರ್ಶನ ಪಂದ್ಯ, ಪ್ರೋ ಬ್ಯಾಟಲ್ ಹಾಗೂ ಅಂತಿಮ ಪಂದ್ಯಗಳ ಮೂಲಕ ಪ್ರೇಕ್ಷಕರ ಮನರಂಜಿಸಿತು. ಲೋ-ಕಿಕ್ ಹಾಗೂ ಫುಲ್ ಕಾಂಟ್ಯಾಕ್ಟ್ ಈ ೨ ವಿಭಾಗಗಳಲ್ಲಿ ಕ್ರೀಡೆ ಆಯೋಜಿಸ ಲಾಗಿತ್ತು. ಬಾಕ್ಸಿಂಗ್ ರಿಂಗ್ ನಿರ್ಮಾಣ ಕೂಡ ಸುಸಜ್ಜಿತವಾಗಿ ನಡೆದಿದ್ದು, ಮಹಿಳೆಯರನ್ನೊಳಗೊಂಡು ಒಟ್ಟು ೬೦ ಮಂದಿ ಕ್ರೀಡಾಪಟುಗಳು ೪ ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಚತ್ತೀಸ್‌ಘಡ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟç, ಆಂದ್ರಪ್ರದೇಶ ರಾಜ್ಯಗಳಿಂದ ಪ್ರತಿಭಾವಂತ ಕಿಕ್ ಬಾಕ್ಸಿಂಗ್ ಕ್ರೀಡಾಪಟುಗಳು ಭಾಗವಹಿಸಿ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಿದರು.
ಮಹಿಳೆಯರ ಲೋ-ಕಿಕ್ ೫೦ ಕೆ.ಜಿ ವಿಭಾಗದಲ್ಲಿ ಕೇರಳದ ಸಂಜು, ಒಡಿಶ್ಶಾದ ಅನಿತಾ,
(ಮೊದಲ ಪುಟದಿಂದ) ಚತ್ತೀಸ್‌ಘಡದ ಸಂಜನಾ ಅವರುಗಳು ಮೊದಲ ೩ ಸ್ಥಾನಗಳನ್ನು ತಮ್ಮದಾಗಿಸಿ ಕೊಂಡರು. ಮಹಿಳೆಯರ ಲೋ-ಕಿಕ್ ೬೦ ಕೆ.ಜಿ ವಿಭಾಗದಲ್ಲಿ ಚತ್ತೀಸ್‌ಘಡದ ಸ್ವಾತಿ ರಜ್ವಾಡೆ, ಮಹಾರಾಷ್ಟçದ ಪಾಯಲ್ ಸೋಮ್‌ನಾತ್ ಅವರುಗಳು ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದರು.
ಫುಲ್ ಕಾಂಟ್ಯಾಕ್ಟ್ - ೫೦ ಕೆ.ಜಿ ಪುರುಷರ ವಿಭಾಗದಲ್ಲಿ ಚತ್ತೀಸ್‌ಘಡದ ರ‍್ವಾರ್ ಎಕ್ಕ, ಮಹಾರಾಷ್ಟçದ ವಿಶಾಲ್ ಅರ್ಜುನ್ ಹಾಗೂ ಆಂದ್ರಪ್ರದೇಶದ ಜಡ ರಾಜೇಶ್ ಅವರುಗಳು ಮೊದಲ ೩ ಸ್ಥಾನಗಳನ್ನು ಪಡೆದುಕೊಂಡರು. ಲೋ-ಕಿಕ್ ಪುರುಷರ ೬೦ ಕೆ.ಜಿ ವಿಭಾಗದಲ್ಲಿ ತಮಿಳುನಾಡಿನ ಗೋಕುಲಕೃಷ್ಣನ್ ಹಾಗೂ ಆಂಧ್ರಪ್ರದೇಶದ ನರಾಮ್ ಸೆಟ್ಟಿ ನರೇಶ್ ಅವರುಗಳು ಮೊದಲೆರಡು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಲೋ-ಕಿಕ್ ಪುರುಷರ ೭೦ ಕೆ.ಜಿ ವಿಭಾಗದಲ್ಲಿ ಮಹಾರಾಷ್ಟçದ ಶೇಕ್ ಶನಾವಾಜ್, ಚತ್ತೀಸ್‌ಘಡದ ಸತ್ಯಂ ಸಾಹು ಹಾಗೂ ಪಶ್ಚಿಮ ಬಂಗಾಳದ ಸಿವ ಗುರುಂಗ್ ಅವರುಗಳು ಮೊದಲ ೩ ಸ್ಥಾನಗಳನ್ನು ಪಡೆದುಕೊಂಡರು. ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನವನ್ನು ನೀಡಲಾಯಿತು. ಆಯಾ ವಿಭಾಗಗಳಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ರೂ.೧೫,೦೦೦ ನಗದು ನೀಡಿ ಗೌರವಿಸಲಾಯಿತು.