ಮಡಿಕೇರಿ, ನ. ೧೫: ಪೊನ್ನಂಪೇಟೆ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನದ ಚುನಾವಣೆ ಸಂದರ್ಭ ಅಡ್ಡ ಮತದಾನ ಮಾಡಿದ ದೂರಿನ ಹಿನ್ನೆಲೆ ಬಿ.ಜೆ.ಪಿ ಬೆಂಬಲಿತ ಮೂವರು ಗ್ರಾ.ಪಂ ಸದಸ್ಯರುಗಳ ವಿರುದ್ಧ ಶಿಸ್ತು ಕ್ರಮಕ್ಕೆ ಪಕ್ಷದ ರಾಜ್ಯ ಸಮಿತಿಗೆ ಬಿ.ಜೆ.ಪಿ ಜಿಲ್ಲಾಧ್ಯಕ್ಷರು ಆಧಾರ ರಹಿತವಾಗಿ ಶಿಫಾರಸ್ಸು ಮಾಡಿದ್ದು, ಜಿಲ್ಲಾ ಬಿ.ಜೆ.ಪಿ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಅಡ್ಡ ಮತದಾನದ ಆರೋಪ ಹೊತ್ತಿರುವ ಬಿ.ಜೆ.ಪಿ ಬೆಂಬಲಿತ ಸದಸ್ಯರಾದ ಅಮ್ಮತೀರ ಆರತಿ ಸುರೇಶ್, ಮಚ್ಚಮಾಡ ವಿಮಲಾ ಹಾಗೂ ಟಿ.ಪಿ ರಮೇಶ್ ಅವರುಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಪಂಚಾಯಿತಿ ಚುನಾವಣೆಯಲ್ಲಿ ನಾವು ಅಡ್ಡ ಮತದಾನ ಮಾಡಿದ್ದೇವೆ ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷರು ಆಧಾರ ರಹಿತವಾಗಿ ಆರೋಪಿಸಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೀಯ ಎಂದು ಅವರುಗಳು ತಿಳಿಸಿದ್ದಾರೆ.