ಮಡಿಕೇರಿ, ನ. ೧೫: ನಗರದ ಶ್ರೀ ಓಂಕಾರೇಶ್ವರ ದೇವಾಲಯದ ರೂಢಿ ಸಂಪ್ರದಾಯದAತೆ ದೇವಾಲಯ ಮುಂಭಾಗದ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ದೀಪ ಹಾಗೂ ಪುಷ್ಪ ಅಲಂಕಾರದ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ವೈದಿಕ ವರ್ಗದವರು ಪೂಜೆ ಸಲ್ಲಿಸಿ ಕಲ್ಯಾಣಿಯಲ್ಲಿ ಸುತ್ತು ಹಾಕಿಸಿದರು. ಇದರೊಂದಿಗೆ ಪಲ್ಲಕ್ಕಿ ಉತ್ಸವ, ದಟ್ಟೋತ್ಸವವು ನಡೆಯಿತು. ಭಕ್ತಾದಿಗಳು ಧಾರ್ಮಿಕ ಕೈಂಕರ್ಯದಲ್ಲಿ ಭಾಗವಹಿಸಿದ್ದರು.