ಮಡಿಕೇರಿ, ನ. ೧೫: ರಾಜ್ಯದಲ್ಲಿ ಫುಟ್ಬಾಲ್ ಕ್ರೀಡೆಯನ್ನು ತಳಮಟ್ಟದಿಂದ ಬೆಳೆಸಲು ಪಣತೊಟ್ಟಿರುವ ರಾಜ್ಯ ಒಲಂಪಿಕ್ಸ್ ಸಂಸ್ಥೆ ಇದೀಗ ಮೂರನೇ ಬಾರಿ ರಾಜ್ಯಮಟ್ಟದ "ಮಿನಿ ಒಲಂಪಿಕ್ಸ್" ಫುಟ್ಬಾಲ್ ಪಂದ್ಯಾವಳಿಯನ್ನು ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನವೆಂಬರ್ ೧೫ ರಿಂದ ಪ್ರಾರಂಭಗೊAಡಿದ್ದು, ೧೮ ರವರೆಗ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಮತ್ತು ರಾಜ್ಯ ಫುಟ್ಬಾಲ್ ಸಂಸ್ಥೆಯ ಮೈದಾನದಲ್ಲಿ ನಡೆಯಲಿದೆ.

ಮಿನಿ ಒಲಂಪಿಕ್ಸ್ ಫುಟ್ಬಾಲ್‌ನಲ್ಲಿ ಈ ಬಾರಿ ಅಂಡರ್ ೧೪, ಬಾಲಕ ಮತ್ತು ಬಾಲಕಿಯರ ತಂಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆಗಸ್ಟ್ ತಿಂಗಳಲ್ಲಿ ನಡೆಯಬೇಕಿದ್ದ ಮಿನಿ ಒಲಂಪಿಕ್ಸ್ ಮಳೆಯ ಕಾರಣದಿಂದಾಗಿ ಮುಂದೂಡಲಾಗಿತ್ತು. ಮಿನಿ ಒಲಂಪಿಕ್ಸ್ನಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಬಾಲಕ ಮತ್ತು ಬಾಲಕಿಯರ ತಂಡಗಳು ಭಾಗವಹಿಸಲಿವೆ.

೮ ತಂಡಗಳಿಗೆ ಮಾತ್ರ ಅವಕಾಶ

ಈ ಬಾರಿಯ ಮಿನಿ ಒಲಂಪಿಕ್ಸ್ ಫುಟ್ಬಾಲ್ ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ತಲಾ ಎಂಟು ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೊಡಗಿನ ಬಾಲಕರ ತಂಡವು ಗ್ರೂಪ್ "ಎ"ನಲ್ಲಿ ಸ್ಥಾನ ಪಡೆದಿದೆ.

ಪ್ರತೀ ತಂಡವು ತಲಾ ಮೂರು ಪಂದ್ಯಗಳನ್ನು ಆಡಬೇಕಾಗಿದ್ದು, ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎರಡು ಗುಂಪುಗಳಲ್ಲಿ ಮೊದಲ ಸ್ಥಾನ ಪಡೆಯುವ ತಂಡವು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ಬಾಲಕರ ಎ ಗ್ರೂಪಿನಲ್ಲಿ ಕೊಡಗು ಡಿಎಫ್‌ಎ, ದಾವಣಗೆರೆ ಡಿಎಫ್‌ಎ, ಮೈಸೂರು ಹಾಗೂ ದಕ್ಷಿಣ ಕನ್ನಡ ಡಿಎಫ್‌ಎ ತಂಡಗಳು ಸ್ಥಾನ ಪಡೆದಿವೆ. ಬಿ ಗುಂಪಿನಲ್ಲಿ ಶಿವಮೊಗ್ಗ ಡಿಎಫ್‌ಎ, ಉತ್ತರ ಕನ್ನಡ ಡಿಎಫ್‌ಎ, ಹಾಸನ ಡಿಎಫ್‌ಎ ಮತ್ತು ಮಂಡ್ಯ (ವೆಸ್ಟ್) ತಂಡಗಳು ಸ್ಥಾನ ಪಡೆದಿವೆ.

ಬಾಲಕಿಯರ ಎ ಗುಂಪಿನಲ್ಲಿ ಬಿಜಾಪುರ ಡಿಎಫ್‌ಎ, ಉತ್ತರ ಕನ್ನಡ ಡಿಎಫ್‌ಎ, ಕೊಡಗು ಡಿಎಫ್‌ಎ ಮತ್ತು ದಕ್ಷಿಣ ಕನ್ನಡ ಡಿಎಫ್‌ಎ ತಂಡಗಳು ಸ್ಥಾನ ಪಡೆದಿವೆ. ಬಿ ಗುಂಪಿನಲ್ಲಿ ಬೆಳಗಾಂ ಡಿಎಫ್‌ಎ, ಶಿವಮೊಗ್ಗ ಡಿಎಫ್‌ಎ, ಹಾವೇರಿ ಡಿಎಫ್‌ಎ ಮತ್ತು ದಾವಣಗೆರೆ ಡಿಎಫ್‌ಎ ತಂಡಗಳು ಸ್ಥಾನ ಪಡೆದಿವೆ.

ಸತತ ಮೂರು ತಿಂಗಳುಗಳಿAದ ಅಭ್ಯಾಸ

ಮಿನಿ ಒಲಂಪಿಕ್ಸ್ ಫುಟ್ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೊಡಗು ತಂಡಕ್ಕೆ ಆಗಸ್ಟ್ ತಿಂಗಳಲ್ಲಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ಅಮ್ಮತ್ತಿಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿತ್ತು.

ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ೩೦೦ ರಿಂದ ೩೫೦ ಕ್ರೀಡಾಪಟುಗಳು ಭಾಗವಹಿಸಿದ್ದರು. ಅಂತಿಮವಾಗಿ ೧೯ ಬಾಲಕರು ಮತ್ತು ೧೭ ಬಾಲಕಿಯರನ್ನು ಆಯ್ಕೆ ಮಾಡಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ಸತತ ಮೂರು ತಿಂಗಳುಗಳಿAದ ಕೊಡಗಿನ ಮಿನಿ ಒಲಂಪಿಕ್ಸ್ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಾ ಬಂದಿದೆ. ಬಾಲಕರ ತಂಡದ ತರಬೇತುದಾರರಾಗಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಮಡಿಕೇರಿಯ ಕ್ರಿಸ್ಟೋಫರ್ ಮತ್ತು ವ್ಯವಸ್ಥಾಪಕರಾಗಿ ಲಿಜೇಶ್ ಅಮ್ಮತ್ತಿ ಕಾರ್ಯನಿರ್ವಹಿಸಿದ್ದಾರೆ. ಬಾಲಕಿಯರ ತಂಡದ ತರಬೇತುದಾರರಾಗಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಮತ್ತು ವ್ಯವಸ್ಥಾಪಕರಾಗಿ ಕೃತಿ ಪಿ.ಜೆ. ಕಾರ್ಯನಿರ್ವಹಿಸಲಿದ್ದಾರೆ.

ಬಾಲಕರ ತಂಡದಲ್ಲಿ ಭಾಗವಹಿಸುವ ಕ್ರೀಡಾಪಟುಗಳು

ಮಿನಿ ಒಲಂಪಿಕ್ಸ್ ಫುಟ್ಬಾಲ್ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಬಾಲಕರ ತಂಡದಲ್ಲಿ, ಚಿರಂತ್ ಅಯ್ಯಪ್ಪ ಪಿ.ಎನ್., ಸಂವಿತ್ ಸ್ಮರಣ್, ಸುಮಿತ್ ಎಸ್., ರಿಶಾದ್ ಎ.ಆರ್., ರಾಜಿಕ್ ಎಸ್.ಎ., ಅಭಯ್ ಕೃಷ್ಣ, ಸೈನ್ ಪಿ., ಸಿನಾನ್ ಪಿ.ಎನ್., ಭುವನೇಶ್, ಶಿಬಿನ್ ವಿನೋದ್, ಮಿಹಾಝ್ ಎನ್.ಕೆ., ಶ್ರಯಾನ್ ಹೆಚ್.ಬಿ., ಮನ್ವಿತ್ ಪ್ರಶಾಂತ್, ಎಂ.ಹೆಚ್. ಇಶಾಮ್, ಝಯಾನ್ ಕೆ.ಎನ್., ಶಹೀಮ್ ಶಾಹುಲ್, ಸಾನ್ವಿಕ್ ಕಾವೇರಪ್ಪ ಆಡಲಿದ್ದಾರೆ.

ಬಾಲಕಿಯರ ತಂಡದಲ್ಲಿ ರಿಶಿಕಾ ಭೀಮಯ್ಯ, ನಮ್ರೀತ್ ಪೂವಮ್ಮ ಸಿ.ಕೆ., ಕುಶಿ ತಂಗಮ್ಮ ಪಿ.ಪಿ., ಹೇಮನ್ಯಾ ಪಿ.ಜೆ., ಜನ್ಯಶ್ರೀ ಯು., ಅಯಾನ ಮುತ್ತಪ್ಪ, ನಿಶಿತಾ ಪಿ.ಎಸ್., ಹಿತಪ್ರಿಯಾ ಪಿ.ಎಸ್., ಚಾಯ ಎನ್., ತುಂತುರು ಬಂಗೇರಾ, ಸುಪ್ರಿಯಾ, ಸೋನಿ ಎಂ.ಎಸ್., ವಿದ್ಯಾ ಆರ್.ಆರ್. ಮತ್ತು ಹಂಶಿಕಾ ದೇಚಮ್ಮಾ ಸ್ಥಾನ ಪಡೆದಿದ್ದಾರೆ.

ಶಾಸಕರ ಪ್ರಯತ್ನ

ಮಿನಿ ಒಲಂಪಿಕ್ಸ್ ಫುಟ್ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಲು ರಾಜ್ಯ ಒಲಂಪಿಕ್ಸ್ ಸಂಸ್ಥೆಯು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅವಕಾಶ ನೀಡಿಲ್ಲ. ರಾಜ್ಯದ ಆಹ್ವಾನಿತ ಜಿಲ್ಲಾ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಬಾರಿಯ ಮಿನಿ ಒಲಂಪಿಕ್ಸ್ಸ್ ಫುಟ್ಬಾಲ್‌ನಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಬಾಲಕ ಮತ್ತು ಬಾಲಕಿಯರ ಫುಟ್ಬಾಲ್ ತಂಡ ಭಾಗವಹಿಸುವಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ರಾಜ್ಯ ಒಲಂಪಿಕ್ಸ್ ಸಂಸ್ಥೆಯ ಪ್ರಮುಖರಿಗೆ ಒತ್ತಡ ಹಾಕಿದ್ದರು. ಅವರ ಪ್ರಯತ್ನದಿಂದ ಈ ಬಾರಿಯ ಮಿನಿ ಒಲಂಪಿಕ್ಸ್ನಲ್ಲಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಬಾಲಕ ಮತ್ತು ಬಾಲಕಿಯರ ತಂಡಕ್ಕೆ ಅವಕಾಶ ಮಾಡಿಕೊಡಲಾಗಿದೆ.